ಜಮ್ಮುಕಾಶ್ಮೀರ: ಜಮ್ಮು ಕಾಶ್ಮೀರದ ಕುಲ್ಲಾಮ್‌ನಲ್ಲಿ ಶಾಲಾ ಶಿಕ್ಷಕಿಯೊಬ್ಬರನ್ನು ಉ-ಗ್ರರು ಹಾಡಹಗಲೇ ಹತ್ಯೆ ಮಾಡಿದ ನಂತರ, ಈ ವಿಷಯದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಜನಿ ಬಾಲಾ ಎಂಬ ಕಾಶ್ಮೀರಿ ಹಿಂದೂ ಶಿಕ್ಷಕಿಯ ಹ-ತ್ಯೆಯ ಬಗ್ಗೆ ಯಾವುದೇ ದುಃಖವನ್ನು ವ್ಯಕ್ತಪಡಿಸುವ ಬದಲು, ಫಾರುಖ್ ಅಬ್ದುಲ್ಲಾ ಈಗ ಎಲ್ಲರನ್ನೂ (ಹಿಂದೂಗಳನ್ನೂ) ಕೊಲ್ಲಲಾಗುವುದು ಎಂದು ಹೇಳಿದ್ದಾರೆ.
ಫಾರೂಕ್ ಅಬ್ದುಲ್ಲಾ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ವೀಡಿಯೊದಲ್ಲಿ, ಅವರು ಮಾಧ್ಯಮಗಳ ಮೇಲೂ ಹರಿಹಾಯ್ದಿದ್ದಾರೆ. ಕುಲ್ಲಾಮ್‌ನಲ್ಲಿ ಮಹಿಳಾ ಶಿಕ್ಷಕಿಯ ಮೇಲೆ ಗುಂಡಿನ ದಾಳಿ ನಡೆದಿದೆ ಈ ಬಗ್ಗೆ ಏನು ಹೇಳುತ್ತೀರಿ ಎಂದು ಪತ್ರಕರ್ತರು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಫಾರೂಕ್ ಅಬ್ದುಲ್ಲಾ, ಎಲ್ಲರೂ ಈಗ ಕೊಲ್ಲಲ್ಪಡುತ್ತಾರೆ.' ಎಂದಿದ್ದಾರೆ.
ಈ ವೀಡಿಯೋ ನೋಡಿದ ನಂತರ ಸಾರ್ವಜನಿಕರಲ್ಲಿ ಫಾರೂಕ್ ಅಬ್ದುಲ್ಲಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅದೇ ಸಮಯದಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆಯಿಂದ ಆಘಾತಕ್ಕೊಳಗಾಗಿರುವ ಜನರು ಶ್ರೀನಗರದಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಶ್ರೀನಗರದ ರಸ್ತೆಗಳನ್ನು ತಡೆದು ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಭಯೋತ್ಪಾದಕರ ದಾಳಿಗೆ ಬಲಿಯಾದ ರಾಹುಲ್ ಭಟ್ ಅವರ ತಂದೆ ಈ ಹತೈಗಳನ್ನು ಟಾರ್ಗೆಟ್ ಕಿಲ್ಲಿಂಗ್ ಎಂದು ಕರೆದಿದ್ದಾರೆ. ರಸ್ತೆಯಲ್ಲಿ ಜೋರಾಗಿ ಘೋಷಣೆಗಳನ್ನು ಕೂಗುವ ಮೂಲಕ ಹಿಂದೂಗಳು ತಮ್ಮ ಸುರಕ್ಷತೆಗಾಗಿ ಒತ್ತಾಯಿಸುತ್ತಿದ್ದಾರೆ.
0 Comments