ಮೂಡುಬಿದಿರೆ: ಅನಾಥ ಮಹಿಳೆಗೆ ನೆರವಾದ ಜನನಿ ಸೇವಾ ಟ್ರಸ್ಟ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ತಾಲೂಕಿನ ಸುಭಾಷ್ ನಗರದ  ಮಹಿಳೆಯೋರ್ವರು ಅನಾರೋಗ್ಯ ವಾಗಿ  ಅಸ್ವಸ್ಥೆಯಾಗಿದ್ದು, ಅವರನ್ನು ಜನನಿ ಸೇವಾ ಟ್ರಸ್ಟ್ ನ ಸದಸ್ಯರು ಸೇರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಇಂದು  ಸೇರಿಸಿದರು.

ಗಿರಿಜಾ ಪೂಜಾರಿ ಎಂಬ ಹೆಸರಿನ ಮಹಿಳೆಯು ಅನಾಥರಾಗಿದ್ದು ಒಂಟಿ ಜೀವನ ನಡೆಸುತ್ತಿದ್ದರು. ಇವರು ಕಳೆದ ಹತ್ತು ದಿನಗಳ ಹಿಂದೆ ಮನೆಯಲ್ಲೇ ಕಾಲುಜಾರಿ ಬಿದ್ದು ಏಟಾಗಿದ್ದು, ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರದ ಮಾಹಿತಿ ಪಡೆಯಲು ಲಭ್ಯವಾಗಿರಲಿಲ್ಲ. ಇವರ ಮಾಹಿತಿಯನ್ನು ಪಡೆದ ಜನನಿ ಸೇವಾ ಟ್ರಸ್ಟ್ ‌

ಹೆಚ್ಚಿನ ಚಿಕಿತ್ಸೆಗೆ  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಬೇಕಾದ ಅಗತ್ಯತೆ ಇತ್ತು. ಮಾಹಿತಿ ಅರಿತ ಮೂಡುಬಿದಿರೆಯ ಪ್ರತಿಷ್ಠಿತ ಜನನಿ ಸೇವಾ ಟ್ರಸ್ಟ್ ಪ್ರಮುಖರು ಕೂಡಲೇ ಸ್ಪಂದಿಸಿ ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು. 

ಸದ್ಯ ಕಾಲಿನ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಎದುರಾಗಿದ್ದು ಆಸ್ಪತ್ರೆಯಲ್ಲಿ ರೋಗಿಯ ಕಡೆಯವರ ಉಪಸ್ಥಿತಿ ಬೇಕಾಗಿತ್ತು. ಜನನಿ ಸೇವಾ ಟ್ರಸ್ಟ್ ಮೂಲಕ ಓರ್ವ ಮಹಿಳೆಯನ್ನು ಆ ಅನಾಥ ಮಹಿಳೆಯ ಪಾಲಕಿಯಾಗಿ ನೋಡಿಕೊಳ್ಳಲು ಒಬ್ಬರನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

Post a Comment

0 Comments