ಬಿಜೆಪಿ ಯುವ ಮೋರ್ಚಾದ "ಭಾರತ ದರ್ಶನ ಸುಶಾಸನ ಯಾತ್ರೆ' ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಂಗಳೂರು: ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿರುವ "ಭಾರತ ದರ್ಶನ ಸುಶಾಸನ ಯಾತ್ರೆ" ಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಇಂದು ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಇದರಲ್ಲಿ ಭಾರತ ದರ್ಶನ ಯಾತ್ರೆಯು ಶುಕ್ರವಾರದಿಂದ ಬೆಂಗಳೂರಿನಿಂದ ಆರಂಭಗೊಳ್ಳಲಿದ್ದು,ಮೊದಲ ಹಂತದ ಯಾತ್ರೆಯು 4 ದಿನಗಳ ವರೆಗೆ ನಡೆಯಲಿದೆ. ಇದರಲ್ಲಿ ಭಾಗವಹಿಸುತ್ತಿರುವ ಕಾರ್ಯಕರ್ತರು ಉತ್ತರ ಮತ್ತು ಈಶಾನ್ಯ ಭಾರತದ ಬಿಜೆಪಿ ಕಾರ್ಯಕರ್ತರಾಗಿದ್ದು, ಕರ್ನಾಟಕದ ಐತಿಹಾಸಿಕ,ಸಾಂಸ್ಕೃತಿಕ, ಔದ್ಯೋಗಿಕ ರಂಗದ ಪರಿಚಯ ಮಾಡಿಕೊಡಲಾಗುತ್ತಿದೆ. ವಿಜಯನಗರದ ಅರಸರ ಐತಿಹಾಸಿಕ ಹಂಪಿ, ಪ್ರಮುಖ ಕೈಗಾರಿಕಾ ಸ್ಥಳವಾಗಿರುವ ಹೆಚ್ ಎ ಎಲ್ ಗೆ ತೆರಳಿ ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ ಉತ್ಪಾದನಾ ವಿಭಾಗಕ್ಕೂ ಭೇಟಿ ನೀಡಲಿದ್ದಾರೆ. ನ್ಯಾಸ್ಕಾಂ, ಓಲಾ ಕಚೇರಿಗಳಿಗೆ ಭೇಟಿ ನೀಡಿ ನಗರದ ನಾವೀನ್ಯಪೂರ್ಣ ಸ್ಟಾರ್ಟ್ ಅಪ್ ಲೋಕ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ಕನಸಿನ ಹಸಿರು ಔದ್ಯೋಗಿಕ ರಂಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ 2ನೇ ಅತಿ ದೊಡ್ಡ ಪಾವಗಡ ಸೋಲಾರ್ ಪಾರ್ಕ್ ಕೂಡ ಯಾತ್ರೆಯ ಭಾಗವಾಗಿರಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್ ಕುಮಾರ್, ಅಜಿತ್ ಹೆಗಡೆ (ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಯುವ ಮೋರ್ಚಾ, ಬಿಜೆಪಿ ಕರ್ನಾಟಕ) ಹಾಗೂ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥತರಿದ್ದರು.

Post a Comment

0 Comments