ಮೂಡಬಿದಿರೆಯಲ್ಲಿ ಸಮಾನ ಮನಸ್ಕ ಯುವಕರಿಂದ 5ನೇ ವರ್ಷದ ಯುಗಾದಿ ಉತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಕಳೆದ ಐದು ವರ್ಷಗಳಿಂದ ಮೂಡಬಿದಿರೆಬಸ್ ನಿಲ್ದಾಣದಲ್ಲಿ ಯುಗಾದಿ ಉತ್ಸವ ಮತ್ತು ಹೊಸ ವರ್ಷ ಆಚರಣೆಯನ್ನು ಮಾಡುತ್ತಾ ಬಂದಿರುವ ಯುವಕರ ತಂಡವೊಂದು ಸಾರ್ವಜನಿಕವಾಗಿ ಬೇವು ಬೆಲ್ಲ ಮತ್ತು ಸಿಹಿ ತಿಂಡಿ ಹಂಚಿ ಹೊಸ ವರ್ಷ ಬರಮಾಡಿಕೊಳ್ಳುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ.

ಪ್ರತೀ ವರ್ಷವೂ ಒಂದೊಂದು ಹೊಸ ಕೆಲಸ ಮಾಡುವ ಯುವಕರು, ಈ ಹಿಂದೆ ಕ್ಯಾನ್ಸರ್ ಪೀಡಿತ ಮಗುವಿಗೆ ತಮ್ಮ ಕೈಲಾದ ಧನಸಹಾಯ ನೀಡುವ ಮೂಲಕ ಮಾದರಿ ಕೆಲಸ ಮಾಡಿದ್ದರು. ಇದಾದ ನಂತರ ಗೋಹತ್ಯೆ ನಿಷೇಧಕ್ಕಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹ, ಕಳೆದ ಬಾರಿ ಮೂಡಬಿದಿರೆಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದ್ದು, ಈ ಬಾರಿ ಬಸ್ ನಿಲ್ದಾಣದ ಅತ್ಯಂತ ಹಿರಿಯ ಬಸ್ ಏಜೆಂಟ್‌ಗಳಿಗೆ ಸನ್ಮಾನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.!

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರು, ಸದಸ್ಯರು ಮತ್ತು ತಂಡದ ಸದಸ್ಯರು, ಅದೇ ರೀತಿ ಸರ್ವಧರ್ಮೀಯ ಜನರು ಕೂಡ ಉಪಸ್ಥಿತರಿದ್ದು, ಸಾರ್ವಜನಿಕವಾಗಿ ಯುಗಾದಿ ಆಚರಿಸಿದರು.

Post a Comment

0 Comments