ಮೂಡುಬಿದಿರೆ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ನಿರ್ಬಂಧ ವಿಧಿಸಿ ಹೈಕೋಟ್೯ ನೀಡಿರುವ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆ ಅಮಿರ್-ಇ-ಷರಿಯತ್ ಕರೆಕೊಟ್ಟಿರುವ ಕರ್ನಾಟಕ ಬಂದ್ ಗೆ ಮೂಡುಬಿದಿರೆಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಮೂಡುಬಿದಿರೆಯಲ್ಲಿ ಮುಸ್ಲಿಂ ಸಮುದಾಯದ ದಿನಸಿ, ಬಟ್ಟೆ, ಮೊಬೈಲ್ ಅಂಗಡಿಗಳು, ಹೊಟೇಲ್, ತರಕಾರಿ ಮತ್ತು ಮೀನು, ಚಿಕನ್ ಸ್ಟಾಲ್ ಗಳನ್ನು ಬಂದ್ ಮಾಡಿದ್ದಾರೆ.
ಮುಸ್ಲಿಂರು ನಡೆಸುತ್ತಿರುವ ಮೆಡಿಕಲ್ ಗಳನ್ನೂ ಬಂದ್ ಮಾಡಿದ್ದಾರೆ. ಅಲ್ಲದೆ ಆಟೋ ರಿಕ್ಷಾ, ಬಸ್ ಚಾಲಕರು ಕೂಡಾ ಕರ್ತವ್ಯಕ್ಕೆ ಹಾಜರಾಗದೆ ಬಂದ್ ಗೆ ಬೆಂಬಲವನ್ನು ಸೂಚಿಸಿದ್ದಾರೆ.
0 Comments