ಮೂಡುಬಿದಿರೆಯ ಅಮರಶ್ರೀಯಲ್ಲಿ ಮಾರ್ಚ್ 20 ರಂದು ದಿ ಕಾಶ್ಮೀರ್ ಫೈಲ್ಸ್ ಉಚಿತ ಸಿನಿಮಾ ಪ್ರದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮೂಡುಬಿದಿರೆ ವ್ಯಾಪ್ತಿಯ ಅಮರಶ್ರೀ ಚಿತ್ರಮಂದಿರದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತ್ ನ  ಗ್ರಾಮಸ್ಥರಿಗಾಗಿ ಮಾ20 ರಂದು ಅಪರಾಹ್ನ  3.30ಕ್ಕೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಉಚಿತವಾಗಿ ಪ್ರದರ್ಶನಗೊಳ್ಳಲಿದೆ.  ಕಾಶ್ಮೀರಿ ಪಂಡಿತರ ನರಮೇಧದ ನೈಜ ಚಿತ್ರಣವನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. 

ಪಡುಮಾರ್ನಾಡು ಗ್ರಾಮ ಪಂಚಾಯತು ವ್ಯಾಪ್ತಿಯ ಪಡುಮಾರ್ನಾಡು ಮತ್ತು ಮೂಡುಮಾರ್ನಾಡು ಗ್ರಾಮಸ್ಥರಿಗಾಗಿ ಉಚಿತ ಪ್ರದರ್ಶನದ ವ್ಯವಸ್ಥೆಯನ್ನು ಗ್ರಾಮದ ಬಿಜೆಪಿ ಮುಖಂಡರು ಆಯೋಜಿಸಿದ್ದಾರೆ. ಚಿತ್ರ ಮಂದಿರದಲ್ಲಿ ಈಗಾಗಲೇ 239ಸೀಟುಗಳನ್ನು ಕಾಯ್ದಿರಿಸಲಾಗಿದ್ದು, 180 ಜನರು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಮೂಡುಬಿದಿರೆ ತಾಲೂಕಿನಲ್ಲಿ ಇದೇ ಮೊದಲನೇ ಬಾರಿಗೆ ಉಚಿತವಾಗಿ ಸಿನಿಮಾ  ಪ್ರದರ್ಶನವಾಗಲಿದೆ.  ದ.ಕ. ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಮ್ಮಿಕೊಂಡಿರುವ   ಇದೇ ಪ್ರಥಮ   ಉಚಿತ ಸಿನಿಮಾ ಪ್ರದರ್ಶನವಾಗಿದೆ.

Post a Comment

0 Comments