ಮಾ.24, 25ಎಲಿಯಾ ಉರೂಸ್

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಇಲ್ಲಿನ ಇರುವೈಲು ಗ್ರಾಮದ ಪುಚ್ಚಮೊಗರು ಎಲಿಯದ ಸಯ್ಯದ್ ಡಾ. ಅಬೂಬಕ್ಕರ್ ವಲಿಯುಲ್ಲಾಹಿ(ಖ.ಸಿ) ದರ್ಗಾ ಶರೀಫ್‌ನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ಉರೂಸ್ ಮುಬಾರಕ್’ ವಿವಿಧ ಧಾರ್ಮಿಕ ಹಾಗೂ ಸೌಹಾರ್ಧ ಕಾರ್ಯಕ್ರಮಗಳೊಂದಿಗೆ ಮಾರ್ಚ್ ೨೪ ಮತ್ತು ೨೫ರಂದು ನಡೆಯಲಿದೆ.

ಎಲಿಯಾ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಈ ಬಗ್ಗೆ ಗುರುವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ   ಮಾಹಿತಿ ನೀಡಿದರು. 

ಸುಮಾರು 700 ವರ್ಷಗಳ ಹಿಂದೆ ಸಯ್ಯದ್ ಅಬೂಬಕ್ಕರ್ ವಲಿಯುಲ್ಲಾಹಿ(ಖ.ಸಿ) ಅವರು ಇಲ್ಲಿ ಅಂತ್ಯವಿಶ್ರಮ ಹೊಂದಿದ್ದು, ಕಳೆದ ನೂರಾರು ವರ್ಷಗಳಿಂದ ವಲಿಯುಲ್ಲಾಹಿ ಅವರ ದರ್ಗಕ್ಕೆ ಜಾತಿ ಮತ ಬೇಧವಿಲ್ಲದೆ  ಜನರು ಭೇಟಿ ನೀಡಿ ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಕಳೆದ ವರ್ಷ ನಡೆಯಬೇಕಿದ್ದ ಉರೂಸ್ ಕಾರ್ಯಕ್ರಮವು ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟು ಈ ವರ್ಷ ನಡೆಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಮಾ.೨೪ರ ಮಗರಿಬ್ ನಮಾಝ್ ಬಳಿಕ ಕಾಜೂರಿನ ಅಸಯ್ಯದ್ ಝೈನುಲ್ ಆಬಿದೀನ್ ಜುಮಾಲುಲ್ಲೆöÊಲಿ ತಂಙಳ್ ಅವರ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ನಡೆಯಲಿದ್ದು, ದ.ಕ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಸೀದಿಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇರಳದ ಇಬ್ರಾಹಿಂ ಖಲೀಲ್ ಹುದವಿ ಅವರು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ. 

ಮಾ.೨೫ರಂದು ಸಂಜೆ ೪ಗಂಟೆಗೆ ಸರ್ವಧರ್ಮ ಸೌಹಾರ್ಧ ಕೂಟ ನಡೆಯಲಿದ್ದು, ಉಡುಪಿ ಬಾರ್ಕೂರಿನ ಸಯ್ಯದ್ ಇಬ್ರಾಹಿಂ ಜುನೈದ್ ತಂಙಳ್ ಅವರು ಈ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ. ಇರುವೈಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಐ.ರಾಘವೇಂದ್ರ ಅಸ್ರಣ್ಣ, ಹೊಸಬೆಟ್ಟು ಚರ್ಚ್ನ ಧರ್ಮಗುರುಗಳಾದ ರೆ|ಫಾ| ಗ್ರೆಗರಿ ಡಿಸೋ’ಜ, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರುಗಳಾದ ಕೆ.ಅಭಯಚಂದ್ರ ಜೈನ್, ಬಿ.ರಮಾನಾಥ ರೈ, ಮುಖಂಡರಾದ ಮಿಥುರ್ ರೈ, ಸುಚರಿತ ಶೆಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. 

ಅದೇ ದಿನ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಕಾಂತಾವರ ಅವರು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ. ನೌಫಲ್ ಸಖಾಫಿ ಕಳಸ, ಶಾಫಿ ಸಅದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಸೀದಿ ಕಮಿಟಿ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಸದಸ್ಯರಾದ ಮುಹಮ್ಮದ್ ಆಸಿಫ್, ಕುಞ್ಞಮೋನು, ಮುಹಮ್ಮದ್ ಸರಫುದ್ದೀನ್ ಹಾಗೂ ಇಸ್ಮಾಯಿಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments