ಧಮ೯ಸ್ಥಳದ ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನ : ಮೂಡುಬಿದಿರೆ ತಾಲೂಕಿನಲ್ಲಿ ವಿವಿಧ ಸೇವಾಕಾಯ೯ಗಳು
ಮೂಡುಬಿದಿರೆ : ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ 79 ನೇ ಜನ್ಮದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ಯೋಜನಾ ಕಛೇರಿ ವ್ಯಾಪ್ತಿಯ ವಿವಿದೆಡೆ ತಾಲೂಕಿನಲ್ಲಿ ಬುಧವಾರ ವಿವಿಧ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.
ಅಲಂಗಾರು ಮೌಂಟ್ ರೋಸರಿ ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮದಲ್ಲಿ 145 ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ,
ಅನಾಥ 45 ಮಕ್ಕಳಿಗೆ ಹಣ್ಣು ಹಂಪಲು ವಿತರಣೆ,ವಿವಿಧ ಅಂಗನವಾಡಿ ಮಕ್ಕಳಿಗೆ ಸಿಹಿತಿಂಡಿ ವಿತರಣೆ , ಶಾಲಾ ಮಕ್ಕಳಿಗೆ ಪೆನ್ನು ಕಲ್ಲರ್ ಪೆನ್ಸಿಲ್ ಪುಸ್ತಕ ವಿತರಣೆ ಹಾಗೂ ವಿವಿಧ ದೇವಾಸ್ಥಾನ ಗಳಲ್ಲಿ ಕ್ಷೀರಾಭಿಷೇಕ, ಹೂವಿನ ಪೂಜೆ, ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ಜನಜಾಗೃತಿ ವೇದಿಕೆ, ತಾಲ್ಲೂಕು ಭಜನಾ ಪರಿಷತ್, ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು ಮತ್ತು ಯೋಜನೆಯ ಕಾರ್ಯಕರ್ತರ ನೇತೃತ್ವದಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

0 Comments