ಮೂಡುಬಿದಿರೆ ರಿಂಗ್ ರೋಡ್ ನಲ್ಲಿ ಅನಧಿಕೃತ ಕಟ್ಟಡ : ಪುರಸಭಾ ಮುಖ್ಯಾಧಿಕಾರಿಯಿಂದ ತಡೆ

ಮೂಡುಬಿದಿರೆ ರಿಂಗ್ ರೋಡ್ ನಲ್ಲಿ ಅನಧಿಕೃತ ಕಟ್ಟಡ : ಪುರಸಭಾ ಮುಖ್ಯಾಧಿಕಾರಿಯಿಂದ ತಡೆ

 ಮೂಡುಬಿದಿರೆ : ಇಲ್ಲಿನ ರಿಂಗ್ ರೋಡ್ ಬಳಿಯ ಖಾಸಗಿ ಜಾಗವೊಂದರಲ್ಲಿ ಅನಧಿಕೃತವಾಗಿ ಕಟ್ಟಡ ನಿಮಿ೯ಸಿ ಅದರಲ್ಲಿ ಮೀನಿನ ವ್ಯಾಪಾರ ನಡೆಸಲು ಉದ್ದೇಶಿಸಿರುವ ಬಗ್ಗೆ ಮಾಹಿತಿ ಪಡೆದ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ ಅವರು ಇತ್ತೀಚೆಗೆ ತಡೆ ಹಿಡಿದಿದ್ದಾರೆ.

  ಪುರಸಭೆಯಿಂದ  ಪರವಾನಿಗೆಯನ್ನು ಪಡೆಯದೆ ಕಟ್ಟಡ ನಿಮಿ೯ಸಲಾಗಿದ್ದು ಅದರಲ್ಲಿ ಸಂತೋಷ್ ಎಂಬವರಿಗೆ ಮೀನಿನ ವ್ಯಾಪಾರ ನಡೆಸಲು ಬಾಡಿಗೆ ರೂಪದಲ್ಲಿ ನೀಡಲಾಗಿದೆ ಎನ್ನಲಾಗಿದೆ. ಆದರೆ ಅಲ್ಲಿ ಮೀನಿನ ವ್ಯಾಪಾರ ನಡೆಸಲು ಅನುಮತಿಯಿಲ್ಲ ಇಲ್ಲವೆನ್ನಲಾಗಿದೆ. 

ಕಳೆದ ಕೆಲವು ತಿಂಗಳ ಹಿಂದೆ ಮೂಡುಬಿದಿರೆಯ ಮೆಸ್ಕಾಂ ಕಛೇರಿಯ ಬಳಿಯಲ್ಲಿ ಮೀನುಗಾರಿಕಾ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಮೀನಿನ ವ್ಯಾಪಾರ ನಡೆಸುತ್ತಿದ್ದರು ಆದರೆ ಸಾವ೯ಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅದನ್ನು ಪುರಸಭೆಯು ಮುಂದುವರೆಸದಂತೆ ಸೂಚನೆ ನೀಡಿತ್ತು ಪ್ರಕರಣವು ಕೋಟು೯ ಮೆಟ್ಟಿಲೇರಿ ಅದನ್ನು ನಿಲ್ಲಿಸುವಂತೆ ಸೂಚಿಸಿತ್ತು.

 ಇದೀಗ ಅದೇ ವ್ಯಕ್ತಿ ಮತ್ತೊಮ್ಮೆ ಅನಧಿಕೃತವಾಗಿ ಮೀನಿನ ವ್ಯಾಪಾರ ನಡೆಸಲು ನಿಧ೯ರಿಸಿರುವುದನ್ನು ಮಾಹಿತಿ ಪಡೆದ ಪುರಸಭೆಯ ಮುಖ್ಯಾಧಿಕಾರಿ ಅವರು ಮೀನಿನ ವ್ಯಾಪಾರ ನಡೆಸಲು ಈ ಪ್ರದೇಶದಲ್ಲಿ ಅನುಮತಿಯಿಲ್ಲವೆಂದು ತಡೆ ನೀಡಿದ್ದಾರೆ.

Post a Comment

0 Comments

Advertisement