ಬಿಜೆಪಿಗೆ ಮೀಸಲಾತಿಯ ಗೊಂದಲವಿಲ್ಲ ಎಲ್ಲಾ ಕ್ಷೇತ್ರದಲ್ಲಿಯೂ ಸಮಥ೯ ಕಾಯ೯ಕತ೯ರಿದ್ದಾರೆ : ದಿನೇಶ್ ಪುತ್ರನ್
ಮೂಡುಬಿದಿರೆ : ಭಾರತೀಯ ಜನತಾ ಪಾಟಿ೯ಗೆ ಇಂತಹುದೇ ಮೀಸಲಾತಿ ಬರಬೇಕೆಂದೇನಿಲ್ಲ. ಯಾವುದೇ ಕ್ಷೇತ್ರದಲ್ಲಿ ಮೀಸಲಾತಿ ಬದಲಾವಣೆಯಾದರೂ ಅಲ್ಲಿ ಸಮಥ೯ವಾದ ಕಾಯ೯ಕತ೯ರ ದಂಡೇ ಇದೆ ಆದ್ದರಿಂದ ಹೆದರುವಂತಹ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದ್ದಾರೆ.
ತಾಲೂಕಿನಲ್ಲಿರುವ ಎರಡು ಜಿ. ಪಂ. ಕ್ಷೇತ್ರಗಳ ಪೈಕಿ ಪುತ್ತಿಗೆ ಜಿ. ಪಂ ಕ್ಷೇತ್ರದ ಮೀಸಲಾತಿ ಬದಲಾವಣೆ ಹೊಂದಿ ಅಂತಿಮ ಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಜಿ. ಪಂ, ತಾ. ಪಂ. ಕ್ಷೇತ್ರಗಳಿಗೆ ಚುನಾವಣೆಯಾಗದೇ ಹಲವು ವರುಷಗಳು ಸಂದಿವೆ ಇದರಿಂದಾಗಿ ಪಂಚಾಯತ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಎಂ. ಪಿ. ಮತ್ತು ಎಂಎಲ್ ಎ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ ಉಳಿದಂತೆ ಪಂಚಾಯತ್ ಮಟ್ಟಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ಸಾಮಾನ್ಯ ಜನರ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ.
ಸರಕಾರ ಚುನಾವಣೆ ನಡೆಸುತ್ತದೋ ಇಲ್ಲವೋ ಎಂಬ ಸಂಶಯವಿದೆ ಹೊರತು ಮೀಸಲಾತಿ ಬದಲಾವಣೆಯ ಬಗ್ಗೆ ಬಿಜೆಪಿಗೆ ಗೊಂದಲವಿಲ್ಲ ಎಂದು ತಿಳಿಸಿದ್ದಾರೆ.

0 Comments