ಅಂಗನವಾಡಿ, ಆಶಾ ಕಾಯ೯ಕತೆ೯ಯರಿಗೆ ಸನ್ಮಾನ
*ನಿಮ್ಮ ಅಣ್ಣನಾಗಿ ಕಷ್ಟಗಳಿಗೆ ಸ್ಪಂದಿಸುವೆ: ಮಿಥುನ್ ರೈ
ಮೂಡುಬಿದಿರೆ: ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾಯ೯ಕತೆ೯ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರು. ಸರಕಾರಗಳು ಎಸ್ ಐ ಆರ್ ಸಹಿತ ವಿವಿಧ ಕೆಲಸಗಳಿಗೆ ನಿಮ್ಮ ಸಹಾಯವನ್ನು ಪಡೆದುಕೊಳ್ಳುತ್ತಿದೆ ನಿಮ್ಮ ಬೇಡಿಕೆ ಈಡೇರಿಕೆಗಾಗಿ ನಾನು ಮತ್ತು ಅಭಯಚಂದ್ರ ಜತೆಯಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಆಗ್ರಹಿಸುತ್ತೇವೆ. ನಿಮ್ಮ ಅಣ್ಣನಾಗಿ ಸದಾ ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಅವರು ಮಿಥುನ್ ರೈ ಅಭಿಮಾನಿ ಬಳಗವು ಭಾನುವಾರ ಪ್ರೀತಮ್ ಗಾಡ೯ನ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗು ಆಶಾ ಕಾರ್ಯಕರ್ತೆಯರಿಗಾಗಿ ಆಯೋಜಿಸಿರುವ ಎರಡನೇ ವರ್ಷದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸನ್ಮಾನ ಕಾಯ೯ಕ್ರಮವು ರಾಜಕೀಯ ಗಿಮಿಕ್ ಅಲ್ಲ. ನನ್ನಲ್ಲಿ ಶಕ್ತಿ ಇರುವವರೆಗೆ ನಿಮ್ಮೆಲ್ಲರ ಆಶೀರ್ವಾದ ಇರುವವರೆಗೆ ಈ ಕ್ಷೇತ್ರದಲ್ಲಿ ಇಂತಹ ಕಾಯ೯ಕ್ರಮ ಮಾಡುತ್ತೇನೆಂಬ ಸಂಕಲ್ಪವನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಮಾಜಿ ಅಭಯಚಂದ್ರ ಜೈನ್ ಮಾತನಾಡಿ ಮಿಥುನ್ ರೈ ಅವರ ಕಾರ್ಯಶೈಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದೆ ಎಂದರು.
ಧಾರ್ಮಿಕ ದತ್ತಿ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಜಿ., ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕಾರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ ಶೆಟ್ಟಿ, ಆಶಾ ಕಾರ್ಯಕರ್ತೆಯರ ತಾಲೂಕು ಸಂಘದ ಅಧ್ಯಕ್ಷೆ ಶೋಭಾ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ್ ಸನಿಲ್, ಪ್ರಮುಖರಾದ ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಪಿ.ಕೆ ಥೋಮಸ್, ಕುಮಾರ್ ಪೂಜಾರಿ, ಅನೀಶ್ ಬೆಳುವಾಯಿ ಉಪಸ್ಥಿತರಿದ್ದರು.
ರಾಜೇಶ್ ಕಡಲಕೆರೆ ಕಾಯ೯ಕ್ರಮ ನಿರೂಪಿಸಿದರು. ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಹರಿಪ್ರಸಾದ್ ನಾಯಕ್ ಮತ್ತು ಮಹಾಲಕ್ಷ್ಮಿ ಶೆಟ್ಟಿಗಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

0 Comments