ಇಸ್ರೇಲಿಗೆ ಪ್ರಯಾಣಿಸುತ್ತಿದ್ದ ವಿಮಾನದ ಪೈಲೆಟ್‌ನ್ನು ಹತ್ಯೆಗೆ ಯತ್ನಿಸಿದ್ದರೂ ನೂರಾರು ಪ್ರಯಾಣಿಕರನ್ನು ಪಾರು ಮಾಡಿದ ಭಾರತದ ಪೈಲೆಟ್ ಸ್ಮಿತ್ ಬಗ್ಗೆ ವಿಶ್ವವ್ಯಾಪಿ ಪ್ರಶಂಸೆ ವ್ಯಕ್ತವಾಗಿದೆ. ಜಗತ್ತಿನ ನಾಯಕರು ಈ ಸಾಧನೆಯನ್ನು ಮುಕ್ತಕಂಠದಿಂದ ಹೊಗಳುತ್ತಿದ್ದರೂ ಭಾರತದ ಕಾಂಗ್ರೆಸ್ ಮಾತ್ರ ಸುಮ್ಮನಿದೆ ಎಂದು ಬಿಜೆಪಿಯ ವಿವಿಧ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಉಪಾಧ್ಯಕ್ಷ ಆಶ್ರಿತ್ ನೋಂಡಾ ಈ ಕುರಿತು ಬರೆದ ಲೇಖನ ವೈರಲ್ ಆಗಿದ್ದು ಸಂಸದರು ಶಾಸಕರು ಬಿಜೆಪಿ ನಾಯಕರು ಸೇರಿದಂತೆ ವಿವಿಧ ಪ್ರಮುಖ ಹಂಚಿಕೊಂಡಿದ್ದಾರೆ.
ಆಶ್ರಿತ್ ನೋಂಡಾ ಪೋಸ್ಟ್ ಏನಾಗಿತ್ತು?
"ಸೋಷಿಯಲ್ ಮೀಡಿಯಾ ಒಂದು ಸುತ್ತು ಸುತ್ತಾಡಿ ಬಂದೆ. ವಿಶ್ವದಲ್ಲಿ ಅತಿಹೆಚ್ಚು ಸುದ್ಧಿಯಲ್ಲಿರುವುದು ಒಂದು ಧರ್ಮದ ವ್ಯಕ್ತಿಯಿಂದ ಪತನವಾಗಬೇಕಿದ್ದ ಇಸ್ರೇಲ್ ವಿಮಾನವನ್ನು ರಕ್ಷಿಸಿದ ಭಾರತೀಯ ಪೈಲೆಟ್ ಬಗೆಗಿನ ವಿಚಾರ. ಜಗತ್ತಿನ ದೊಡ್ಡದೊಡ್ಡ ದೇಶದ ಗಣ್ಯರು ನಮ್ಮ ನೆಲದ ಪೈಲೆಟ್ ಸ್ಮಿತ್ ರವರನ್ನು ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ. ಭಾರತದಲ್ಲಂತೂ ಎಲ್ಲೆಡೆ ಸಂಭ್ರಮದ ವಾತಾವರಣ. ಸಾಮಾಜಿಕ ಜಾಲತಾಣ ಸ್ಮಿತ್ ಸಾಧನೆಯನ್ನು ಕೊಂಡಾಡುತ್ತಿದೆ. ನಮ್ಮ ಪ್ರಧಾನಿಯವರು, ಬಿಜೆಪಿ ಸಂಸದರು, ಶಾಸಕರು, ಕಾರ್ಯಕರ್ತರು ನಮ್ಮ ದೇಶಕ್ಕೆ ಒಲಿದ ಗೌರವಕ್ಕೆ ಹೆಮ್ಮೆ ಪಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಮಿತ್ ಸಮಯಪ್ರಜ್ಞೆಯನ್ನು ಕೊಂಡಾಡಿದೆ.
ಆದರೆ ಎಲ್ಲಿದ್ದಾರೆ ಮಹಾನುಭಾವ ಕಾಂಗ್ರೆಸ್ಸಿಗರು? ಗಾಜಾ ಪರ ಕಣ್ಣೀರು ಸುರಿಸುವ ರಾಹುಲ್ ಗಾಂಧಿ ಕಾಣುತ್ತಿಲ್ಲ, ಪ್ಯಾಲೆಸ್ಟೈನ್ ಬ್ಯಾಗ್ ಹಿಡಿದುಕೊಂಡು ಬರುವ ಪ್ರಿಯಾಂಕ ವಾದ್ರಾ ಸುದ್ಧಿ ಇಲ್ಲ, ರಿಮೋಟ್ ಕಂಟ್ರೋಲ್ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಷಯವೇ ಗೊತ್ತಿಲ್ವೇನೋ, ಅವರ ಮಗ ಪ್ರಿಯಾಂಕ ಖರ್ಗೆಗೆ ಆರೆಸ್ಸೆಸ್ ವಿರುದ್ಧ ಮಾತಾಡೋದು ಮಾತ್ರ ಗೊತ್ತು, ಸಿಎಂ ಸಾಹೇಬ್ರು ತುಟಿ ಬಿಚ್ಚಿಲ್ಲ. ಕನಿಷ್ಠ ಒಂದು ಮೆಚ್ಚುಗೆ ಬೇಡ್ವಾ?
ಅದೇ ವಿಮಾನ ದುರಾದೃಷ್ಟವಶಾತ್ ಪತನವಾಗುತ್ತಿದ್ದರೆ? ಆ ಪೈಲೆಟ್‌ಗೆ ಹಿಂದೂ ಭಯೋತ್ಪಾದಕ ಎಂಬ ಪಟ್ಟುವನ್ನು ಕಟ್ಟಲು ಇದೇ ನಾಯಕರು ಮುಂದೆ ಬರುತ್ತಿರಲಿಲ್ವಾ.? ಇಷ್ಟು ಸಾಧನೆ ಜಗತ್ತಿಗೆ ಕಂಡ ನಂತರವೂ ಕೆಲ ವ್ಯಕ್ತಿಗಳು, ಮಾಧ್ಯಮಗಳು ಕಪೋಕಲ್ಪಿತ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಪತನವಾಗುತ್ತಿದ್ದರೆ ದೇಶಕ್ಕೆ ನಮ್ಮವರೇ ಕಳಂಕ ತರುತ್ತಿದ್ದರು.
ಪ್ರಧಾನಿ ಮೋದಿಯವರು ಗಾಯಗೊಂಡ ಪೈಲೆಟ್ ಸ್ಮಿತ್ ಅವರ ಜೊತೆಗೆ ವೀಡಿಯೋ ಕರೆಯ ಮೂಲಕ ಮಾತನಾಡುವಾಗ ಒಂದು ವಿಷಯ ಹೇಳಿದ್ರು ಅರ್ಥ ಆಯ್ತಾ? "ಒಂದುವೇಳೆ ಹೆಚ್ಚುಕಡಿಮೆ ಆಗಿರುತ್ತಿದ್ದರೆ ನಮ್ಮ ದೇಶ ಜಗತ್ತಿನ ಮುಂದೆ ತಲೆ ತಗ್ಗಿಸಬೇಕಿತ್ತು. ಎಲ್ಲಾ ವಿಷಯವನ್ನು ಮೊಬೈಲ್‌ನಲ್ಲಿ ಹೇಳಲು ಸಾಧ್ಯವಿಲ್ಲ. ಭೇಟಿಯಾದಾಗ ತಿಳಿಸುವೆ" ಎಂದು ಹೇಳಿದ್ದರು. ಅದರ ಅರ್ಥ ಇದುವೇ. ಹೆಚ್ಚುಕಡಿಮೆ ಆಗಿರುತ್ತಿದ್ದರೆ ಭಾರತದ ಪೈಲೆಟ್ ಈ ಕೃತ್ಯ ಮಾಡಿದ್ದಾನೆ, ಅವನು ಹಿಂದೂ, ಅವನು ದೈವ ಭಕ್ತ, ಅವನು ಹನುಮಾನ್ ಚಾಲೀಸಾ ಹೇಳುತ್ತಿದ್ದ, ಅವರು ಹಿಂದೂ ಭಯೋತ್ಪಾದಕ ಎಂದು ಹೇಳುವ ಜನರನ್ನು ನಾವು ಕಾಣಬೇಕಿತ್ತು. ದೇವರ ದಯೆ ನಮ್ಮ ಗೌರವ ಉಳಿಯಿತು.
ಸದಾ ದೇಶದ ವಿರುದ್ಧ ಕುತಂತ್ರ ಮಾಡುವ ವಿರೋಧ ಪಕ್ಷದವರು ನಮ್ಮ ದೇಶದ ಗೌರವ ಕಾಪಾಡಿದವರನ್ನು ಕಿಂಚಿತ್ತೂ ಸೌಜನ್ಯ ತೋರದೆ ಅಭಿನಂದಿಸುವುದಿಲ್ಲ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ರಾಹುಲ್ ಗಾಂಧಿ ವಿಶ್ ಮಾಡದಿದ್ದರೆ ನಾವ್ಯಾರೂ ಮಾಡಬಾರದು ಎಂಬುದು ಕಾಂಗ್ರೆಸ್ ನಾಯಕರ ಅಲಿಖಿತ ನಿಯಮ. ಸ್ಮಿತ್ ಉಳಿಸಿದ್ದು ಬಿಜೆಪಿ, ಆರೆಸ್ಸೆಸ್ ಗೌರವ ಅಲ್ಲ, ದೇಶದ ಗೌರವ. ವಿರೋಧ ಪಕ್ಷಗಳು ತಮ್ಮ ಸಿದ್ಧಾಂತವನ್ನು ಬದಲಾಯಿಸುವವರೆಗೂ ಅಧಿಕಾರಕ್ಕೆ ಬರಲ್ಲ. ಯಾಕೆಂದರೆ ಈಗಿನ ಜನರಿಗೆ ಎಲ್ಲವೂ ಅರ್ಥವಾಗುತ್ತದೆ. ಸುಳ್ಳು ಇತಿಹಾಸ ಹೇಳಿ ಓಟು ಹಾಕಿಸುವ ಕಾಲ ಹೋಗಿದೆ. ಸ್ಮಿತ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವ"

0 Comments