ಪಾದಯಾತ್ರೆ ಎಲ್ಲಾ ಯಾತನೆಗಳನ್ನು ದೂರ ಮಾಡಲಿ: ಕಮಲಾದೇವಿ ಪ್ರಸಾದ ಆಶ್ರಣ್ಣ

ಪಾದಯಾತ್ರೆ ಎಲ್ಲಾ ಯಾತನೆಗಳನ್ನು ದೂರ ಮಾಡಲಿ: ಕಮಲಾದೇವಿ ಪ್ರಸಾದ ಆಶ್ರಣ್ಣ

ಮೂಡುಬಿದಿರೆ: ಭಕ್ತಿ ಎನ್ನುವುದು ಕೇವಲ ಪ್ರಾರ್ಥನೆಗೆ ಸೀಮಿತವಾಗದೆ, ಬದುಕಿಗೆ ಧೈರ್ಯ, ಮನಸ್ಸಿಗೆ ನೆಮ್ಮದಿ ಹಾಗೂ ಮುನ್ನಡೆಯಲು ಆತ್ಮವಿಶ್ವಾಸವನ್ನು ನೀಡುವ ಶಕ್ತಿಯಾಗಬೇಕು. “ದೇವಸಾನ್ನಿಧ್ಯದತ್ತ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ನಮ್ಮ ಯಾತನೆಗಳನ್ನು ದೂರಮಾಡಿಲಿ ಎಂದು  ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ನುಡಿದರು.

  ಅವರು ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು ಇದರ ವತಿಯಿಂದ ಆಯೋಜಿಸಲಾದ ‘ಅಮ್ಮ ನಡೆ ನಮ್ಮ ನಡೆ’ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದರು. 

ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಕ್ತಿ, ಶ್ರದ್ಧೆ, ಶಿಸ್ತು ಮತ್ತು ಸಂಸ್ಕೃತಿಯ ಕುರಿತಾದ ಅರಿವು ಬೆಳೆಸುವುದರೊಂದಿಗೆ, ಜೀವನದ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯವನ್ನು ರೂಪಿಸುವಲ್ಲಿ ಇಂತಹ ಧಾರ್ಮಿಕ ಪಾದಯಾತ್ರೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ  ರಶ್ಮಿತಾ ಯುವರಾಜ್ ಜೈನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಕಾಂತಾವರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಭಾಷಾ ವಿಭಾಗದ ಮುಖ್ಯಸ್ಥ ಡಾ. ವಾದಿರಾಜ ಕಲ್ಲೂರಾಯ, ಉಪನ್ಯಾಸಕ ಅಶೋಕ್ ಹಾಗೂ ಹಾಸ್ಟೆಲ್ ವಾರ್ಡನ್‌ಗಳು ಉಪಸ್ಥಿತರಿದ್ದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ 75 ವಿದ್ಯಾರ್ಥಿಗಳು ಭಕ್ತಿಭಾವದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಕಟೀಲು ಕ್ಷೇತ್ರದಲ್ಲಿ ದೇವಿಯ ದರ್ಶನದ ಬಳಿಕ ವಿದ್ಯಾರ್ಥಿಗಳಿಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮ ನಡೆಯಿತು.

Post a Comment

0 Comments

Advertisement