ಯುವ ಬಂಟರ ಸಂಘದ ವತಿಯಿಂದ ' ವಿಕ್ರಮ್-ವೇದ' ನಾಟಕ * 15 ಜನ ಅಶಕ್ತರಿಗೆ ಸಹಾಯ

ಯುವ ಬಂಟರ ಸಂಘದ ವತಿಯಿಂದ ' ವಿಕ್ರಮ್-ವೇದ' ನಾಟಕ

 * 15 ಜನ ಅಶಕ್ತರಿಗೆ ಸಹಾಯ
   
      ಮೂಡುಬಿದಿರೆ : ಎಲ್ಲ ಸಮುದಾಯದ ಹದಿನೈದು ಮಂದಿ ಅಶಕ್ತರಿಗೆ ಸಹಾಯಧನ ಮಾಡುವ ಸದುದ್ದೇಶದಿಂದ ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ' ವಿಕ್ರಮ್-ವೇದ' ತುಳು ನಾಟಕವು ಭಾನುವಾರ ಕನ್ನಡಭವನದಲ್ಲಿ  ಯಶಸ್ವಿ ಪ್ರದರ್ಶನ ಕಂಡಿತು.
    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಆಳ್ವಾಸ್ ಮುಖ್ಯಸ್ಥ ಡಾ.ಮೋಹನ್ ಆಳ್ವ, ಮೂಡುಬಿದಿರೆ ಬಂಟರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುಚರಿತ ಶೆಟ್ಟಿ, ಪ್ರೇಮನಾಥ ಮಾರ್ಲ, ಡಾ.ಅಮರಶ್ರೀ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶೋಭಾ ಹೆಗ್ಡೆ,ಚಾವಡಿಮನೆ ಜಗನ್ನಾಥ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ,ಸುದರ್ಶನ ಎಂ, ಮಿಥುನ್ ರೈ,ಉದಯಕುಮಾರ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರ್ ಮುಂತಾದವರು ಈ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
    ಗೋವಾ ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೆಳುವಾಯಿ, ಕಾರ್ಕಳ ಬಂಟರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಶೆಟ್ಟಿ ತೋಡಾರ್, ಕಾರ್ಯದರ್ಶಿ ರಮೇಶ್ ಶೆಟ್ಟಿ ಮಿಜಾರ್, ಕೋಶಾಧಿಕಾರಿ ಭರತ್ ಶೆಟ್ಟಿ ಇರುವೈಲ್, ಗೌತಮ್ ಶೆಟ್ಟಿ ಬೆಳುವಾಯಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments

Advertisement