ಕೋಟೆಬಾಗಿಲಿನಲ್ಲಿ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಯುವಕನೂ ಸಾವು
ಮೂಡುಬಿದಿರೆ : ಬುಧವಾರ ಸಂಜೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ತಿರುವಿನಲ್ಲಿ ನಡೆದಿದ್ದ ಸ್ಕೂಟಿ ಸ್ಕಿಡ್ ನಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಯುವಕನೂ ಸಾವನ್ನಪ್ಪಿದ್ದಾನೆ.
ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಚಂದ್ರ ಎಂಬವರ ಪುತ್ರ ದೀಕ್ಷಿತ್ ಪೂಜಾರಿ ಎಂಬ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬುಧವಾರ ಸಂಜೆ ಕೋಟೆಬಾಗಿಲು ಕಡೆಯಿಂದ ಶಿತಾ೯ಡಿಗೆ ಹೋಗುವಾಗ ಇವರ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು.
ಸುಧಾಕರ ಹೆಗ್ಡೆ ಅವರ ಪುತ್ರ ಪ್ರಶ್ವಿತ್ ಹೆಗ್ಡೆ ಸಂಜೆ ಮೃತಪಟ್ಟರೆ ರಾತ್ರಿ ವೇಳೆ ದೀಕ್ಷಿತ್ ಮೃತಪಟ್ಟಿದ್ದಾನೆ.
ಸ್ಕೂಟಿ ಸ್ಕಿಡ್ ಆದ ಪರಿಣಾಮ ಇಬ್ಬರು ಯುವಕರೂ ಮೃತಪಟ್ಟಿದ್ದಾರೆ.
ಸ್ಕೂಟಿ ಚಲಾಯಿಸಿಕೊಂಡು ಹೋಗುವ ಸಂದಭ೯ ಇಬ್ಬರೂ ಯುವಕರು ಹೆಲ್ಮೆಟ್ ಧರಿಸದೆ ಇದ್ದುದರಿಂದ ಬಿದ್ದಾಗ ತಲೆಯ ಭಾಗ ನೆಲಕ್ಕೆ ತಾಗಿ ಗಂಭೀರ ಗಾಯಗಳಾಗಿ ಇಬ್ಬರೂ ಮೃತಪಟ್ಟಿದ್ದಾರೆ.

0 Comments