ಈದು ಅಶೋಕ್ ಕುಮಾರ್ ಜೈನ್ ಸಹಿತ, ಬೊಮ್ಮರಬೆಟ್ಟು ಯುವ ಬಾಂಧವೆರ್, ಕಕೇ೯ರಾ ಸಹೋದರರಿಗೆ 'ಕಂಬಳ ಅಕಾಡೆಮಿ ಪ್ರಶಸ್ತಿ'

ಈದು ಅಶೋಕ್ ಕುಮಾರ್ ಜೈನ್ ಸಹಿತ, ಬೊಮ್ಮರಬೆಟ್ಟು ಯುವ ಬಾಂಧವೆರ್, ಕಕೇ೯ರಾ ಸಹೋದರರಿಗೆ 'ಕಂಬಳ ಅಕಾಡೆಮಿ ಪ್ರಶಸ್ತಿ'
ಮೂಡುಬಿದಿರೆ : ದ.ಕ,ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ,ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಕೊಡಲ್ಪಡುವ 'ಕಂಬಳ ಅಕಾಡೆಮಿ ಪ್ರಶಸ್ತಿ-2026' ಗೆ  ಕಂಬಳದಲ್ಲಿ ಹ್ಯಾಟ್ರಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಹಿರಿಯ ಓಟಗಾರ ಹೊಸ್ಮಾರು ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ಸಹಿತ ಬೊಮ್ಮರಬೆಟ್ಟು ಯುವ ಬಾಂಧವೆರ್, ಕಕೇ೯ರಾ ಸಹೋದರರು  ಆಯ್ಕೆಯಾಗಿದ್ದಾರೆ.


  ಅಕಾಡೆಮಿ ವತಿಯಿಂದ ನಡೆಯುತ್ತಿರುವ 7 ನೇ ವರ್ಷದ ಕಂಬಳ ತರಬೇತಿದಾರರಿಗೆ ಸಬ್ ಜೂನಿಯರ್ ವಿಭಾಗದ ಕೋಟಿ ಚೆನ್ನಯ ಜೋಡುಕರೆ ಪ್ರಾಯೋಗಿಕ ಕಂಬಳವು ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಅ.8 ಗುರುವಾರದಂದು ನಡೆಯಲಿದ್ದು ಇದೇ ಸಂದಭ೯ದಲ್ಲಿ ಬೆಳಿಗ್ಗೆ 11-30ಕ್ಕೆ  ಪ್ರಶಸ್ತಿ ಪ್ರದಾನ ನಡೆಯಲಿದೆ.

 ಸಚಿವರಾದ ಯು.ಟಿ.ಖಾದರ್,ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ,ಸುನಿಲ್ ಕುಮಾರ್,ಬಿ.ರಮಾನಾಥ ರೈ,ಸಂಸದ ಬ್ರಿಜೇಶ್ ಚೌಟ,ಪುತ್ತೂರು ಶಾಸಕ ಅಶೋಕ್ ರೈ ಸಹಿತ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಸಂಚಾಲಕರಾದ ಕೆ.ಗುಣಪಾಲ ಕಡಂಬ ಅವರು ತಿಳಿಸಿದ್ದಾರೆ.

Post a Comment

0 Comments

Advertisement