ಶಿರ್ತಾಡಿಯಲ್ಲಿ ಮರಗಳ್ಳತನ : ಇಬ್ಬರ ವಿರುದ್ಧ ಪ್ರಕರಣ ದಾಖಲು
ಮೂಡುಬಿದಿರೆ : ಸರಕಾರಿ ಜಾಗದಿಂದ ಮರಗಳ್ಳತನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿರ್ತಾಡಿಯ ಧರ್ಮರಾಜ ಪೂವಣಿ ಹಾಗೂ ಪೂರ್ಣಚಂದ್ರ ಶೆಟ್ಟಿ ಈ ಪ್ರಕರಣದ ಆರೋಪಿಗಳು.
ಶಿರ್ತಾಡಿ ಪರಿಸರದ ಸರಕಾರಿ ಜಾಗದಲ್ಲಿರುವ ಮರಗಳನ್ನು ಕಡಿದು ದೈವಸ್ಥಾನವೊಂದರ ಹೆಸರಿನಲ್ಲಿ ಸಾಗಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸುದತ್ತ ಜೈನ್ ಶಿರ್ತಾಡಿ ಅವರು ಇತ್ತೀಚೆಗೆ ಆರೋಪಿಸಿದ್ದರು.
ಇವರ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments