ಕಂಬಳ ಅಕಾಡೆಮಿಯಿಂದ ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳ: ಶಿಬಿರಾಥಿ೯ಗಳಿಗೆ ಸ್ಪಧೆ೯*ಕಂಬಳದ ಕ್ಷೇತ್ರದ ಮೂವರು ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ಪ್ರದಾನ

ಕಂಬಳ ಅಕಾಡೆಮಿಯಿಂದ ಕಡಲಕೆರೆಯಲ್ಲಿ ಪ್ರಾಯೋಗಿಕ ಕಂಬಳ: ಶಿಬಿರಾಥಿ೯ಗಳಿಗೆ ಸ್ಪಧೆ೯

*ಕಂಬಳದ ಕ್ಷೇತ್ರದ ಮೂವರು ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ಪ್ರದಾನ 

ಮೂಡುಬಿದಿರೆ: ಕಂಬಳವು ಇಂದು ತುಳುನಾಡಿನ ಸರ್ವಶ್ರೇಷ್ಠ ಕ್ರೀಡೆಯಾಗಿ ಗುರುತಿಸಿಕೊಂಡಿದೆ. ಕಂಬಳ ಕ್ಷೇತ್ರಕ್ಕೆ ಅತ್ಯುತ್ತಮ ಓಟಗಾರರನ್ನು ನೀಡಲು ಅಕಾಡೆಮಿಯಿಂದ ವ್ಯವಸ್ಥಿತವಾಗಿ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು  ಪೊಲೀಸ್ ಹಿರಿಯ ಅಧಿಕಾರಿ ಅನಿಲ್ ಬುಮಾರೆಡ್ಡಿ ಹೇಳಿದರು. 

ಅವರು ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ತರಬೇತಿ ಪಡೆದ 42 ಮಂದಿ ಯುವ ಓಟಗಾರರಿಗೆ ಏಳನೇ ವರ್ಷದ ತರಬೇತಿಯ ಪ್ರಯುಕ್ತ ಗುರುವಾರ ಕಡಲಕೆರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಅಕಾಡೆಮಿ ಪ್ರಶಸ್ತಿ ಪ್ರದಾನ:   ಈದು ಪಡ್ಯಾರ ಮನೆಯ ಅಶೋಕ್ ಕುಮಾರ್ ಜೈನ್,  ಹಿರಿಯಡ್ಕ,  ಬೊಮ್ಮರಬೆಟ್ಟು ಯುವ ಬಾಂಧವರು( ಸರ್ವೋತ್ತಮ ಶೆಟ್ಟಿ) ಹಾಗೂ ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ ಅವರಿಗೆ  ಕಂಬಳ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

 ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಳೆದ ಏಳು ವರ್ಷಗಳಿಂದ ಕಂಬಳ ಓಟಗಾರರಿಗೆ ತರಬೇತಿ ನೀಡುತ್ತಿರುವುದರಿಂದ ಅತ್ಯುತ್ತಮ ಓಟಗಾರರು ಇಂದು ನಮ್ಮ ನಡುವೆ ಸಾಧಕರಾಗಿದ್ದಾರೆ. ಏಳು ವರ್ಷಗಳಲ್ಲಿ ತರಬೇತಿ ನಡೆಸಲು ಅಕಾಡೆಮಿಯೊಂದಿಗೆ ಕೈಜೋಡಿಸಿದವರ ಚಿರಋಣಿ ಎಂದರು.

ಜಿಲ್ಲಾ ಕಂಬಳ ಕಂಬಳ ಶಿಸ್ತು ಸಮಿತಿಯ ಭಾಸ್ಕರ ಎಸ್. ಕೋಟ್ಯಾನ್, ಉದ್ಯಮಿ,  ಕಂಬಳದ ಪ್ರೋತ್ಸಾಹಕ ದೋಟ ಹರಿ ಮೀನಾಕ್ಷಿ ಸುರೇಶ್ ಶೆಟ್ಟಿ, ಹೊಕ್ಕಾಡಿಗೋಳಿ ಕಂಬಳದ ಸಂಘಟಕ ರಶ್ಮಿತ್ ಶೆಟ್ಟಿ ಕೈತ್ರೋಡಿ,  ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ, ಕಂಬಳ ಉದ್ಘೋಷಕ ರವೀಂದ್ರ ಶೆಟ್ಟಿ ಕುಕ್ಕುಂದೂರು, ಚಂದ್ರಹಾಸ ಶೆಟ್ಟಿ ಪುತ್ತೂರು, ಧನಕೀರ್ತಿ ಬಲಿಪ ಹಂಡೇಲು,  ನವೀನ್ ಸಾಂತ್, ಸತೀಶ್ ಹೊಸ್ಮಾರ್,  ಸುದೀಪ್ ಜೈನ್ ಶಿರ್ಲಾಲು, ನವೀನ್ ಅಂಬೂರಿ, ರಘು ಪೆಲಕುಂಜ, ನವೀನ್, ಮಂಜು ಪೂಜಾರಿ ಬೈಂದೂರು, ಸತ್ತಾರ್ ಉಪಸ್ಥಿತರಿದ್ದರು.

Post a Comment

0 Comments

Advertisement