ಮೂಡುಬಿದಿರೆ : ಗಾಂಧಿ ಜಯಂತಿಯ ಪ್ರಯುಕ್ತ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ವಿವಿಧ 20 ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೂಡುಬಿದಿರೆಯಲ್ಲಿ ಬೃಹತ್ ಸ್ವಚ್ಛತಾ ಜಾಗೃತಿ ಅಭಿಯಾನವು ನಡೆಯಿತು.
ರೋಟರಿ ಶಿಕ್ಷಣ ಸಂಸ್ಥೆಯ ಬಳಿಯಿಂದ ಆರಂಭಗೊಂಡ ಜಾಥಾಕ್ಕೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಡೆನ್ನಿಸ್ ಪಿರೇರಾ, ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ, ರೋಟರಿ ಕ್ಲಬ್ ನ ಅಧ್ಯಕ್ಷ ಡಾ. ಆಶೀರ್ವಾದ್, ಇನ್ನರ್ ವ್ಹೀಲ್ ಕ್ಲಬ್ ನ ಉಪಾಧ್ಯಕ್ಷೆ ಅನಿತಾ ಶೆಟ್ಟಿ, ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಮುರಳೀಧರ್ ಕೋಟ್ಯಾನ್,
ರೋಟರಿ ಕ್ಲಬ್ ಝೋನ್ 4ರ ಸಹಾಯಕ ಗವನ೯ರ್ ಶ್ರೀಕಾಂತ್ ಕಾಮತ್, ಝೋನ್ 4ರ ವಲಯ ಸೇನಾನಿ ಪೂಣ೯ಚಂದ್ರ ಜೈನ್, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾಯ೯, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ನವೀನ್ ಕಕೇ೯ರಾ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್, ಜವನೆರ್ ಬೆದ್ರದ ಅಧ್ಯಕ್ಷ ಅಮರ್ ಕೋಟೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ನಿತಿನ್ ಬೆಳುವಾಯಿ, ಜೈನ್ ಮಿಲನ್ ನ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್
ಸಂಸ್ಥೆಯ ಬಳಿಯಿಂದ ಸ್ವರಾಜ್ಯ ಮೈದಾನದವರೆಗೆ ನಡೆದ ಸ್ವಚ್ಛತಾ ಜಾಗೃತಿ ಜಾಥಾದಲ್ಲಿ ಪೌರ ಕಾಮಿ೯ಕರು, ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾಥಿ೯ಗಳು ಎನ್.ಎಸ್.ಎಸ್, ಎನ್. ಸಿ.ಸಿ ವಿದ್ಯಾಥಿ೯ಗಳು, ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಸ್ವಚ್ಛತಾ ಘೋಷಣೆಗಳ ಫಲಕಗಳೊಂದಿಗೆ ಜಾಗೃತಿ ಮೂಡಿಸಿದರು.

0 Comments