ಮೂಡುಬಿದಿರೆ : ಹಿಂದೆ ಪೂಕರೆ, ದೈವಗಳ ಹೆಸರಿನಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಕಂಬಳಗಳು ಇಂದು ಆಧುನಿಕ ಕಂಬಳಗಳಾಗಿ ಮಾಪ೯ಟ್ಟಿವೆ. ನಾವು ಕಂಬಳಗಳಲ್ಲಿ ನಡೆಯುವ ಧಾಮಿ೯ಕ ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ಅರಿತುಕೊಳ್ಳುವ ಅಗತ್ಯತೆಯಿದೆ ಎಂದು ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷ ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಹೇಳಿದರು.
ಅವರು ಕಂಬಳ ಸಂರಕ್ಷಣೆ, ನಿವ೯ಹಣೆ ಮತ್ತು ತರಬೇತಿ ಅಕಾಡೆಮಿ ಮಿಯಾರು ಕಾಕ೯ಳ ಇದರ ವತಿಯಿಂದ ಒಂಟಿಕಟ್ಟೆ ಕಡಲಕೆರೆ ಸೃಷ್ಟಿ ಗಾಡ೯ನ್ ನಲ್ಲಿ ನಡೆಯುತ್ತಿರುವ ಏಳನೇ ವಷ೯ದ ಕಂಬಳ ತರಬೇತಿ ಶಿಬಿರದಲ್ಲಿ ಬುಧವಾರ ಸಂಜೆ ನಡೆದ ಸಭಾ ಕಾಯ೯ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ಕಂಬಳದ ಧಾಮಿ೯ಕ ಆಚರಣೆ ಮತ್ತು ಸಾಂಪ್ರದಾಯ" ಎಂಬ ವಿಷಯದ ಕುರಿತು ಮಾತನಾಡಿದರು.
ಆಧುನಿಕ ಕಂಬಳಗಳು ನಡೆಯುತ್ತಿರುವ ಈ ಸಂದಭ೯ದಲ್ಲಿಯೂ ಮುಲ್ಕಿ, ಐಕಳ, ಕಟಪಾಡಿ ಹಾಗೂ ಬಳ್ಳಮಂಜ ಕಂಬಳಗಳು ಈಗಲೂ ಧಾಮಿ೯ಕ ಆಚರಣೆ, ಸಾಂಪ್ರದಾಯಗಳೊಂದಿಗೆ ನಡೆಯುತ್ತಿರುವ ಬಗ್ಗೆ ಶಿಬಿರಾಥಿ೯ಗಳಿಗೆ ತಿಳಿಸಿದರು.
ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಿವ೯ ವಿಶ್ವನಾಥ ಪ್ರಭು, ಜ್ವಾಲಾ ಪ್ರಸಾದ್ ಉಪಸ್ಥಿತರಿದ್ದರು. ನವೀನ್ ಪಾಲಡ್ಕ ಸಹಕರಿಸಿದರು.
ಶಿಬಿರಾಥಿ೯ ಮುಂಡ್ರೊಟ್ಟು ಬೆಳುವಾಯಿ ಶಶಿಕಾಂತ್ ಪೂಜಾರಿ ಸ್ವಾಗತಿಸಿ ವಂದಿಸಿದರು.

0 Comments