ಮೂಡುಬಿದಿರೆ : ಹಿರಿಯ ನ್ಯಾಯವಾದಿ ಹಾಗೂ ನೋಟರಿ ಎಲ್. ಡಿ ಬಳ್ಳಾಲ್ (94ವ)ಅವರು ವಯೋ ಸಹಜ ಕಾರಣದಿಂದ ಮಂಗಳೂರಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಮೂಡುಬಿದಿರೆ ಲಾಡಿ ಗುತ್ತುವಿನ ಮನೆತನದ ಹಿರಿಯರಾಗಿರುವ ಅವರು ಮಂಗಳೂರಿನ ಎಯ್ಯಾಡಿಯಲ್ಲಿ ನೆಲೆಸಿದ್ದರು. ಇಂದು ಮಧ್ಯಾಹ್ನ 12.30ರವರೆಗೆ ಎಯ್ಯಾಡಿಯ ಸ್ವಗೃಹದಲ್ಲಿ ಮೃತರ ಅಂತಿಮ ದಶ೯ನಕ್ಕೆ ಅವಕಾಶವಿದೆ. ಸಂಜೆ 4.30ಕ್ಕೆ ಲಾಡಿಗುತ್ತುವಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

0 Comments