ಅ. 2ರಂದು ಮೂಡುಬಿದಿರೆಯಲ್ಲಿ ಸ್ವಚ್ಛತಾ ಜಾಗೃತಿ ಜಾಥಾ

ಅ. 2ರಂದು ಮೂಡುಬಿದಿರೆಯಲ್ಲಿ ಸ್ವಚ್ಛತಾ ಜಾಗೃತಿ ಜಾಥಾ

ಮೂಡುಬಿದಿರೆ : ಗಾಂಧಿ ಜಯಂತಿಯ ಪ್ರಯುಕ್ತ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ಅ. 2ರಂದು ಮೂಡುಬಿದಿರೆಯಲ್ಲಿ ಬೃಹತ್ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಯಲಿದೆ. 
 ಬೆಳಿಗ್ಗೆ 8.30ಕ್ಕೆ ಜ್ಯೋತಿನಗರ ರೋಟರಿ ವಿದ್ಯಾ ಸಂಸ್ಥೆಯ  ಬಳಿಯಿಂದ ಸ್ವರಾಜ್ಯ ಮೈದಾನದವರೆಗೆ ಸ್ವಚ್ಛತಾ  ಜಾಗೃತಿ ಜಾಥಾ ಆರಂಭವಾಗಲಿದೆ.
 
ಬಳಿಕ ಕಾಮಧೇನು ಸಭಾಭವನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪುರಸಭೆಯ 55ಮಂದಿ ಪೌರಕಾಮಿ೯ಕರನ್ನು  ಸನ್ಮಾನಿಸಲಾಗುವುದು. 
 ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ, ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ ಭಾಗವಹಿಸಲಿದ್ದು ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಡೆನ್ನಿಸ್ ಪಿರೇರಾ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡುಬಿದಿರೆಯ ವಿವಿಧ 20 ಸಂಘ ಸಂಸ್ಥೆಗಳು ಈ ಜಾಥಾದಲ್ಲಿ ಭಾಗವಹಿಸಲಿವೆ.

Post a Comment

0 Comments

Advertisement