ಸಾಯಿ ಮಾನಾ೯ಡ್ ಸೇವಾ ಸಂಘದಿಂದ 98ನೇ ಸೇವಾ ಯೋಜನೆ ಹಸ್ತಾಂತರ
ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ
98ನೇ ಸೇವಾ ಯೋಜನೆಯನ್ನು ಆನಾರೋಗ್ಯದಿಂದ ಬಳಲುತ್ತಿರುವ ಪಡುಮಾನಾ೯ಡು ಗ್ರಾಮದ ಮುರಗೋಳಿಯ ನಿವಾಸಿ ಶಕುಂತಲಾ ಯು. ಪೂಜಾರಿ ಅವರ ಚಿಕಿತ್ಸೆಗೆ ರೂ. 10,000ದ ಚೆಕ್ ನ್ನು ಹಸ್ತಾಂತರಿಸಲಾಯಿತು.
ಮೂಡುಬಿದ್ರಿ ತಾಲೂಕಿನ ಪಡುಮಾರ್ನಾಡ್ ಗ್ರಾಮದ ಮುರಗೋಳಿ ಪರಿಸರದ ಶಕುಂತಲಾ ಯು. ಪೂಜಾರಿ
ಎಂಬವರು ಕಳೆದ 4ವರ್ಷ ದಿಂದ ಎರಡು ಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದು ಇದುವರೆಗೆ ಆಸ್ಪತ್ರೆಯಲ್ಲಿ 4ಲಕ್ಷ ಕ್ಕಿಂತ ಹೆಚ್ಚು ಖರ್ಚು ಆಗಿರುತ್ತದೆ. ವಾರಕ್ಕೆ 2ಬಾರಿ ಡಯಾಲಿಸಿಸ್ ಮಾಡಲು ಇರುವುದರಿಂದ ಇವರಿಗೆ ವಾರಕ್ಕೆ 5000ರೂಪಾಯಿ ಬೇಕಾಗುತ್ತದೆ.
ಇವರ ಅಸಹಾಯಕತೆಯನ್ನು ಗಮನಿಸಿ ಸೇವಾ ಸಂಘವು ಸೆಪ್ಟೆಂಬರ್ ತಿಂಗಳ ಮೊದಲ ಸೇವಾ ಯೋಜನೆಯನ್ನು ಸೆ. 27ರಂದು ಹಸ್ತಾಂತರಿಸಿದೆ.

0 Comments