ಅ. 4 : ಮೂಡುಬಿದಿರೆಯಲ್ಲಿ ಯುವವಾಹಿನಿಯಿಂದ ಕ್ರೀಡೋತ್ಸವ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಅ. 4 : ಮೂಡುಬಿದಿರೆಯಲ್ಲಿ ಯುವವಾಹಿನಿಯಿಂದ ಕ್ರೀಡೋತ್ಸವ 

ಮೂಡುಬಿದಿರೆ : ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ  ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಕ್ರೀಡಾಂಗಣದಲ್ಲಿ ಅ. 4ರಂದು ಯುವವಾಹಿನಿ ಕ್ರೀಡೋತ್ಸವ -2026 ನಡೆಯಲಿದೆ.
   ಬೆಳಿಗ್ಗೆ 9.00ಕ್ಕೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಕಾಯ೯ಕ್ರಮವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಕಾರವಾರ ನೌಕಾನೆಲೆಯ ಐಎನ್ಎಸ್ ವಿಕ್ರಮಾದಿತ್ಯದ ಮುಖ್ಯ ವೈದ್ಯಕೀಯ ಅಧಿಕಾರಿ ಸಜ೯ನ್ ಕಮಾಂಡರ್ ಡಾ/ ಅಜು೯ನ್ ಅಂಚನ್ ಧ್ವಜವಂದನೆ ಸ್ವೀಕರಿಸಲಿದ್ದಾರೆ. 
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಗೌರವ ಉಪಸ್ಥಿತರಿರುವರು.
 ಮಾಜಿ ಸಚಿವರುಗಳಾದ ಕೆ. ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾಯ೯ದಶಿ೯ ಮಿಥುನ್ ರೈ,  ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಲಹೆಗಾರ ಡಾ/ಎನ್. ಟಿ. ಅಂಚನ್, ಉದ್ಯಮಿ ನಾರಾಯಣ ಪಿ. ಎಂ, ಕಾಕ೯ಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಮೂಡುಬಿದಿರೆ ಬ್ರಹ್ಮಶ್ರೀ ಗು.ನಾ. ಸ್ವಾ ಸೇವಾ ಸಂಘದ ಅಧ್ಯಕ್ಷ ಅಧ್ಯಕ್ಷ ನವೀನ್ ಚಂದ್ರ ಕಕೇ೯ರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 
 
ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ವಿಶ್ವಕಪ್ ಚಿನ್ನದ ಪದಕ ವಿಜೇತೆ ಧನಲಕ್ಷ್ಮೀ ಪೂಜಾರಿ ಗೌರವ ಅಭಿನಂದನೆ ನಡೆಯಲಿದೆ. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾಯ೯ದಶಿ೯ ರೇಖಾ ಗೋಪಾಲ್, ಮೂಡುಬಿದಿರೆ ಘಟಕದ ಕ್ರೀಡಾ ನಿದೇ೯ಶಕ ಹರೀಶ್ ಪೂಜಾರಿ ಮಾರೂರು ಉಪಸ್ಥಿತರಿರುವರು. 

ಸಂಜೆ 5.00ಗಂಟೆಗೆ  ಸಮಾರೋಪ ಸಮಾರಂಭ ನಡೆಯಲಿದ್ದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಲಿದ್ದಾರೆ. 
 ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಡಿಸ್ಟಿಕ್ ಗವನ೯ರ್ ಸತೀಶ್ ಬೋಳಾರ್, ಬೆಳುವಾಯಿ ಸಿ. ಎ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಇವ೯ತ್ತೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಎಂ. ವಿವೇಕ್ ಆಳ್ವ, ಕುದ್ರೋಳಿ ಶ್ರೀ ಗೋಕಣ೯ನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮುಲ್ಕಿ ಇದರ ಅಧ್ಯಕ್ಷ ಸೂಯ೯ಕಾಂತ್ ಜೆ. ಸುವಣ೯, ಮಂಗಳೂರು ವಿಕಾಸ್ ಕಾಲೇಜಿನ ಟ್ರಸ್ಟಿ ಸೂರಜ್ ಕಲ್ಯಾ, ನಮ್ಮ ಕುಡ್ಲ ಚಾನೆಲ್ ನ ಲೀಲಾಕ್ಷ ಬಿ. ಕಕೇ೯ರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು, ಕೇಂದ್ರ ಸಮಿತಿಯ ಕ್ರೀಡಾ ನಿದೇ೯ಶಕ ಶಂಕರ್ ಎ. ಕೋಟ್ಯಾನ್ ಹಾಗೂ ಮೂಡುಬಿದಿರೆ ಘಟಕದ ಕಾಯ೯ದಶಿ೯ ಮೇಘನಾ ಉಪಸ್ಥಿತರಿರುವರು.
ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಸ್ಪಧೆ೯ಗಳು ನಡೆಯಲಿವೆ.

Post a Comment

0 Comments

Advertisement