5ನೇ ವಷ೯ದ ಬನ್ನಡ್ಕ ಸಾವ೯ಜನಿಕ ಶಾರದೋತ್ಸವ
ಮೂಡುಬಿದಿರೆ: ಜ್ಞಾನ, ಕಲೆ ಹಾಗೂ ಸಂಗೀತದ ಅಧಿದೇವತೆ ಶಾರದೆ.
ಅಜ್ಞಾನದ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುವ ಶಾರದೆಯನ್ನು ಆದಿಶಕ್ತಿಯಾಗಿ ಪೂಜಿಸಲಾಗುತ್ತದೆ ಎಂದು ನ್ಯೂ ವೈಬ್ರಂಟ್ ಪಿಯು ಕಾಲೇಜಿನ ನಿರ್ದೇಶಕ ಡಾ. ಶರತ್ ಗೋರೆ ಹೇಳಿದರು.
ಅವರು ಸಾರ್ವಜನಿಕ ಶಾರದೋತ್ಸವ ಟ್ರಸ್ಟ್ ಬನ್ನಡ್ಕ ಇದರ ವತಿಯಿಂದ ಬನ್ನಡ್ಕ ದೈವಸ್ಥಾನದ ಆವರಣದಲ್ಲಿ ನಡೆಯುವ ಎರಡು ದಿನಗಳ ಕಾಲ ನಡೆಯುವ 5ನೇ ವಷ೯ದ ಸಾರ್ವಜನಿಕ ಶ್ರೀ ಶಾರದೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿಶ್ವತುಳುವ ಮಹಾಸಭಾದ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಧಾರ್ಮಿಕ ಹಬ್ಬಗಳು ಮನಷ್ಯರ ನಡುವಿನ ಧ್ವೇಷವನ್ನು ದೂರ ಮಾಡಿ ಏಕತೆಯನ್ನು ಗಟ್ಟಿಗೊಳಿಸುತ್ತದೆ. ತುಳುನಾಡಿನ ಆಚಾರ, ವಿಚಾರಗಳು ವಿಶ್ವವ್ಯಾಪಿಯಾಗಿಸುವಲ್ಲಿ ಎಲ್ಲರ ಪ್ರಯತ್ನ ಅಗತ್ಯ ಎಂದರು.
ಸನ್ಮಾನ : ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಅನುಷಾ ಪ್ರಜ್ವಲ್ ಆಚಾರ್ಯರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಎಂ.ದಯಾನಂದ ಪೈ ಅಧ್ಯಕ್ಷತೆ ವಹಿಸಿದರು. ಬನ್ನಡ್ಕ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುಕುಮಾರ್ ಬಲ್ಲಾಳ್, ಹೇಮರಾಜ್ ರಾವ್ ಬೆಂಗಳೂರು, ಕೆಎಂಎಫ್ ನಿರ್ದೇಶಕ ಕೆ. ಪಿ. ಸುಚರಿತ ಶೆಟ್ಟಿ, ಗಣೇಶೊತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ, ಮಹಿಳಾ ಸದಸ್ಯೆ ಸ್ವಾತಿ ಕಾಮತ್ ಕಟಪಾಡಿ, ಶಾರದೋತ್ಸವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾನಾ೯ಡ್, ಪ್ರಭಾಕರ್, ನಮಿರಾಜ್ ಬಲ್ಲಾಳ್, ಸುರೇಶ್ ಅಂಚನ್ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬೆಳಿಗ್ಗೆ ಶಾರದಾ ದೇವಿಯನ್ನು ಮೆರವಣಿಗೆ ತಂದು ಬಳಿಕ ಮಾರ್ನಾಡು ವೇದಮೂರ್ತಿ ಎಂ.ಆರ್ ಅನಂತ ಪದ್ಮನಾಭ ಅಸ್ರಣ್ಣರ ಪೌರೋಹಿತ್ಯದಲ್ಲಿ ಪ್ರತಿಷ್ಠಾಪಿಸಲಾಯಿತು. ಸಮಿತಿಯ ಕೋಶಾಧಿಕಾರಿ ಸಂತೋಷ್ ನಾಯಕ್ ಸ್ವಾಗತಿಸಿದರು. ಸತೀಶ್ ಹೊಸ್ಮಾರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

0 Comments