ಪಡುಕೊಣಾಜೆಯಲ್ಲಿ ಮನೆಗೆ ಸಿಡಿಲು ಬಡಿದು ಹಾನಿ
ಮೂಡುಬಿದಿರೆ: ಸೋಮವಾರ ಅಪರಾಹ್ನ ಪಡುಕೊಣಾಜೆಯಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮವಾಗಿ ಮನೆಯ ಗೋಡೆ ಮತ್ತು ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾಗಿದೆ.
ಶಿತಾ೯ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೊಣಾಜೆಯ ಯೋಗಿನಿ ಪೂಜಾರಿ ಅವರ ಮನೆ ಹಾನಿಗೊಳಗಾದ ಮನೆಯಾಗಿದೆ.
ಪ್ರಸ್ತುತ ವರ್ಷದಲ್ಲಿ ಈ ಮನೆಗೆ ಎರಡನೇ ಬಾರಿಗೆ ಸಿಡಿಲು ಬಡಿದ ಘಟನೆಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

0 Comments