ಮೂಡುಬಿದಿರೆ : ಮಂಗಳೂರು-ಕಾಕ೯ಳ ರಾ. ಹೆದ್ದಾರಿ ಹಾದು ಹೋಗುವ ಬನ್ನಡ್ಕ ಪ್ರದೇಶದಲ್ಲಿ ಸವೀ೯ಸ್ ರಸ್ತೆಯ ಕಾಮಗಾರಿಯು ಭರದಿಂದ ಸಾಗುವ ಮೂಲಕ ದ. ಕ. ಸಂಸದ ಬ್ರಿಜೇಶ್ ಚೌಟ ಅವರು ಜನರಿಗೆ ನೀಡಿದ ಭರವಸೆಯಂತೆ ಸ್ಪಂದಿಸಿ ಗಮನ ಸೆಳೆದಿದ್ದಾರೆ.
ರಾ. ಹೆ. ನಿಮಾ೯ಣದ ಸಂದಭ೯ದಲ್ಲಿ ಇಲಾಖೆಯು ಬನ್ನಡ್ಕದಲ್ಲಿ ಸವೀ೯ಸ್ ರಸ್ತೆಯನ್ನು ನಿಮಿ೯ಸದೆ ಇದ್ದದ್ದರಿಂದ ಆ ಪ್ರದೇಶದಲ್ಲಿ ಅಪಘಾತಗಳು ಸಂಭವಿಸಿ ಹಲವರು ಪ್ರಾಣಗಳನ್ನು ಕಳೆದುಕೊಳ್ಳುವ ಮೂಲಕ ಅಪಘಾತ ವಲಯವೆಂದೇ ಗುರುತಿಸಿಕೊಂಡಿತ್ತು.
ಈ ಬಗ್ಗೆ ಸ್ಥಳೀಯರು ತಮಗೆ ಸವೀ೯ಸ್ ರಸ್ತೆಯನ್ನು ನಿಮಿ೯ಸಿಕೊಡುವಂತೆ ನಾಲ್ಕು ತಿಂಗಳ ಹಿಂದೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹಾಗೂ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದಿದ್ದರು.
ನಂತರ ಬನ್ನಡ್ಕದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಚೌಟ ಅವರು ಎಲ್ಲರ ಬೇಡಿಕೆಯಂತೆ 600 ಮೀಟರ್ ಗ್ಯಾಪ್ನಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುವುದು. ಎರಡು-ಮೂರು ಕಡೆಗಳಲ್ಲಿ ಭೂಸ್ವಾಧೀನದ (ಲ್ಯಾಂಡ್ ಅಕ್ವಿಸಿಷನ್) ಸಮಸ್ಯೆ ಇದೆ. ಆದರೂ ಹಳೆಯ ಯೋಜನೆಯ (ಪ್ಲಾನ್) ಅನುಗುಣವಾಗಿಯೇ ಕೆಲಸಗಳನ್ನು ಮಾಡಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಚಿವರು ಹಾಗೂ ಬೆಂಗಳೂರಿನ ಪ್ರಾದೇಶಿಕ ಕಚೇರಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಲಾಗಿದ್ದು ಅಂದಾಜು ಪಟ್ಟಿ ಸಿದ್ಧಪಡಿಸುವ ಕೆಲಸ ಪ್ರಾರಂಭವಾಗಿದೆ. ಪ್ರೊಸೀಜರಲ್ ಅನುಮೋದನೆ ಸಿಕ್ಕ ತಕ್ಷಣ
ಆದಷ್ಟು ಬೇಗ ಸವೀ೯ಸ್ ರಸ್ತೆ ನಿಮಾ೯ಣ, ಕ್ರಾಸಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿ ತೆರಳಿದ್ದರು.
ಸಂಸದ ನೀಡಿದ ಭರವಸೆಯಂತೆಯೇ ಇದೀಗ ಸವೀ೯ಸ್ ರಸ್ತೆಯ ಕಾಮಗಾರಿಯು ನಡೆಯುತ್ತಿದ್ದು ಶೀಘ್ರದಲ್ಲಿಯೇ ಪೂಣ೯ಗೊಂಡು ಜನರ ಅಗತ್ಯಗಳಿಗೆ ತೆರೆದುಕೊಳ್ಳಲಿದೆ.

0 Comments