ಪಣಪಿಲ ಪಿಲ್ಚಂಡಿ ದೇವಸ್ಥಾನಕ್ಕೆ ಶಿಲಾನ್ಯಾಸ
ಮೂಡುಬಿದಿರೆ: ಪಣಪಿಲ ಗ್ರಾಮದ ಕೋಡಿ ದೈವ ಮಹಮ್ಮಾಯಿ ಹಾಗೂ ಪಿಲ್ಚಂಡಿ ದೈವದ ದೇವಸ್ಥಾನದ ಜೀರ್ಣೋದ್ಧಾರದ ಸಂಕಲ್ಪವನ್ನು ಮಾಡಿದ್ದು ಈ ನಿಮಿತ್ತ ಆದಿತ್ಯವಾರದಂದು ನೂತನ ದೈವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ವೇದಮೂರ್ತಿ ಶ್ರೀ ಮುರಳಿಕೃಷ್ಣ ಭಟ್ ರವರ ನೇತೃತ್ವದಲ್ಲಿ ಪೂಜಾದಿ ಕೈಂಕರ್ಯಗಳು ನೆರವೇರಿದ್ದು ಗ್ರಾಮದ ಗುತ್ತು, ಬರ್ಕೆ ಹಾಗೂ ಆಡಳಿತ ಸಮಿತಿಯ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

0 Comments