ಕಲ್ಲಬೆಟ್ಟುವಿನಲ್ಲಿ ರಜತ ಸಂಭ್ರಮದ ಸಾವ೯ಜನಿಕ ಗಣೇಶೋತ್ಸವ *ಹಿಂದೂ ಸಮಾಜ ಏಕ ಮನಸ್ಸಿನಲ್ಲಿ ಸಂಘಟಿತರಾಗಬೇಕು : ಶ್ರೀಕಾಂತ್ ಶೆಟ್ಟಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಕಲ್ಲಬೆಟ್ಟುವಿನಲ್ಲಿ ರಜತ ಸಂಭ್ರಮದ ಸಾವ೯ಜನಿಕ ಗಣೇಶೋತ್ಸವ 

*ಹಿಂದೂ ಸಮಾಜ ಏಕ ಮನಸ್ಸಿನಲ್ಲಿ ಸಂಘಟಿತರಾಗಬೇಕು : ಶ್ರೀಕಾಂತ್ ಶೆಟ್ಟಿ

ಮೂಡುಬಿದಿರೆ : ನಮ್ಮ ಇಡೀ  ಸಮಾಜದಲ್ಲಿ ವಿವಿಧ ಜಾತಿಗಳಿದ್ದು ಅವುಗಳಲ್ಲಿ ವಿಶೇಷವಾದ ಗುಣವಿದೆ. ಪ್ರತಿಯೊಂದು ಜಾತಿಗೂ ಭಾಷೆಯಿದೆ, ಆಚರಣೆಗಳಿವೆ. ನಮ್ಮಲ್ಲಿ ಎಷ್ಟೇ  ಜಾತಿ, ಜನಾಂಗಗಳಿದ್ದರೂ ನಾವು ಬೇಧಭಾವಗಳನ್ನು ಮರೆತು ಭಾರತಮಾತೆಗಾಗಿ, ನಮ್ಮ ಸಂಸ್ಕೃತಿಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಹಿಂದೂ ಸಮಾಜ ಏಕ ಮನಸ್ಸಿನಲ್ಲಿ ಸಂಘಟಿತರಾಗಬೇಕಾಗಿದೆ ಎಂದು ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾಕ೯ಳ ಹೇಳಿದರು. 

ಅವರು ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು, ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ವಣ೯ಗೌರಿ ಮಾತೃಮಂಡಳಿ ಕಲ್ಲಬೆಟ್ಟು-ಕರಿಂಜೆ-ಮಾರೂರು ಇದರ ವತಿಯಿಂದ ಶ್ರೀ ಗಣೇಶ ಸೇವಾಧಾಮ ಕಲ್ಲಬೆಟ್ಟು ಇದರ 25 ನೇ ವಷ೯ ಸಾವ೯ಜನಿಕ ಗಣೇಶೋತ್ಸವದ ಅಂಗವಾಗಿ ಜಿ. ಕೆ. ಭಟ್ ವೇದಿಕೆಯಲ್ಲಿ ನಡೆದ ಸಭಾ ಕಾಯ೯ಕ್ರಮದಲ್ಲಿ ಭಾಗವಹಿಸಿ ಧಾಮಿ೯ಕ ಉಪನ್ಯಾಸ ನೀಡಿದರು. 

ನಮ್ಮಲ್ಲಿ ಇನ್ನು ಕೂಡಾ ಮೇಲು, ಕೀಳು ಎಂಬ ಭಾವನೆ ಜೀವಾಂತವಾಗಿದೆ. ನಾವು ನಮ್ಮ ಮನೆಯೊಳಗಡೆ ನಾಯಿ, ಬೆಕ್ಕು, ಅನ್ಯಮತೀಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದೇವೆ ಆದರೆ ಒಂದು ವಗ೯ದವರಿಗೆ ನಾವು ಇನ್ನೂ ಕೂಡಾ ಮನೆಯೊಳಗಡೆ ಕರೆಯಲು ಹಿಂದೇಟು ಹಾಕುತ್ತಿರುವುದು ದುರಂತ ಎಂದ ಅವರು ನಾವೆಲ್ಲರೂ ಗಣೇಶೋತ್ಸವದಲ್ಲಿ ಭಗವಧ್ವಜದ ಕೆಳಗಡೆ ಒಂದಾದಂತೆ ನಿಜ ಜೀವನದಲ್ಲಿಯೂ ಒಗ್ಗಟ್ಟಾಗಿರಬೇಕೆಂದರು.

  ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಬೈಲೂರು ಅಧ್ಯಕ್ಷತೆ ವಹಿಸಿದ್ದರು. 

ಗಣೇಶೋತ್ಸವದಂಗವಾಗಿ ಏಪ೯ಡಿಸಿದ್ದ ವಿವಿಧ ಸ್ಪಧೆ೯ಗಳ ವಿಜೇತರಿಗೆ ಉದ್ಯಮಿ ಮಹಾವೀರ ಜೈನ್ ಬಹುಮಾನ ವಿತರಿಸಿದರು. 

ಸಮ್ಮಾನ : ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಜಯಗೋಪಾಲ್ ತೋಳ್ಪಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ್ ಕೋಟ್ಯಾನ್, ಧಾಮಿ೯ಕ ಕ್ಷೇತ್ರದಲ್ಲಿ ವೆಂಕಟರಾಜ ಅಸ್ರಣ್ಣ, ರಾಮಣ್ಣ ಕುಂದರ್ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸೂಯ೯ಣ್ಣ ಹೆಗ್ಡೆ ಅವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು. 

  ಎಸ್. ಎಸ್. ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. 

    ಕರಿಂಜೆ ಗುತ್ತು ಕೆ. ಕೃಷ್ಣರಾಜ ಹೆಗ್ಡೆ, ಚಲನಚಿತ್ರ ನಿದೇ೯ಶಕ ಕಿಶೋರ್ ಹೆಗ್ಡೆ, ಪುರಸಭೆಯ ಮಾಜಿ ಸದಸ್ಯ ಸುರೇಶ್ ಕೋಟ್ಯಾನ್, ಉದ್ಯಮಿಗಳಾದ ಐ. ರಾಘವೇಂದ್ರ ಪ್ರಭು, ಶ್ರೀಧರ್ ಕೆ. ಹಾಗೂ ಸತೀಶ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಣ೯ಗೌರಿ ಮಾತೃ ಮಂಡಳಿಯ ಅಧ್ಯಕ್ಷೆ ಶಕುಂತಲಾ ರಾಮಚಂದ್ರ ಉಪಸ್ಥಿತರಿದ್ದರು.
  ಕಾಯ೯ದಶಿ೯ ಪ್ರಮೋದ್ ಆಚಾಯ೯ ಮಾರೂರು,ಉಪಾಧ್ಯಕ್ಷರುಗಳಾದ ಪ್ರದೀಪ್ ರೈ ತೆಂಕಬೆಟ್ಟುಗುತ್ತು, ರಂಜಿತ್ ಕಲ್ಲಬೆಟ್ಟು, ಕಾಯಾ೯ಲಯ ನಿವಾ೯ಹಕ ಸದಾನಂದ ನಾರಾವಿ, ಜತೆ ಕಾಯ೯ದಶಿ೯ಗಳಾದ ನಿತಿನ್ ಕಲ್ಲಬೆಟ್ಟು, ವಿಜೇಶ್ ಕರಿಂಜೆ, ಸೂರಜ್ ಕೆ. ಕೊಡಂಗಲ್ಲು, ಕೋಶಾಧಿಕಾರಿ ರೋಹಣ್ ಅತಿಕಾರಬೆಟ್ಟು, ಕ್ರೀಡಾ ಸ್ಪಧಾ೯ ಸಂಯೋಜಕರಾದ ಸುರೇಂದ್ರ ಉಪೆ೯ಲ್ ಪಾದೆ, ಕಾತಿ೯ಕ್ ಮಾರೂರು, ಸಂತೋಷ್ ಉಪೆ೯ಲ್ ಪಾದೆ, ಗಣೇಶ ಸೇವಾ ಟ್ರಸ್ಟ್ ನ ಕಾಯ೯ದಶಿ೯ ಸುಧೀರ್ ಪೈ ಈ ಸಂದಭ೯ದಲ್ಲಿದ್ದರು. 

  ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸುಮಾ ಪೈ ಪ್ರಾಥ೯ನೆ ನೆರವೇರಿಸಿದರು.ಗೋಪಾಲಕೃಷ್ಣ ಜಿ. ಕೆ ಮತ್ತು ಅಕ್ಷತಾ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments

Advertisement