ಸತ್ಯನಾರಾಯಣ ಭಜನಾ ಮಂಡಳಿ ಸಿದ್ದಕಟ್ಟೆ–ಕಲ್ಕೂರಿ ಪದವು ಮಕ್ಕಳಿಗೆ ಸಮವಸ್ತ್ರ ವಿತರಣೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಸತ್ಯನಾರಾಯಣ ಭಜನಾ ಮಂಡಳಿ ಸಿದ್ದಕಟ್ಟೆ–ಕಲ್ಕೂರಿ ಪದವು ಮಕ್ಕಳಿಗೆ ಸಮವಸ್ತ್ರ ವಿತರಣೆ
ಸಿದ್ದಕಟ್ಟೆ: ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಸಿದ್ದಕಟ್ಟೆ–ಕಲ್ಕೂರಿ ಪದವು ಇದರ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಸಿದ್ದಕಟ್ಟೆಯಲ್ಲಿ ನಡೆಯಿತು. ಮಕ್ಕಳಲ್ಲಿ ಶಿಸ್ತು, ಏಕತೆ, ಆತ್ಮವಿಶ್ವಾಸ ಹಾಗೂ ಸಂಘಟನಾ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ತಂಡದ ಮೊದಲ ಗಣೇಶ ಸೇವೆಯು ಸಿದ್ದಕಟ್ಟೆಯಲ್ಲಿ ನಡೆಯಲಿದ್ದು, ಸಮವಸ್ತ್ರ ಧರಿಸಿ ಮಕ್ಕಳು ಗಣೇಶೋತ್ಸವದ ಸೇವೆಯಲ್ಲಿ ಭಾಗವಹಿಸಲಿದ್ದಾರೆ. ತಂಡದ ಮೊದಲ ಸೇವೆಯೇ ಗಣೇಶನ ಸೇವೆಯೊಂದಿಗೆ ಆರಂಭವಾಗುತ್ತಿರುವುದು ವಿಶೇಷವಾಗಿದೆ.
ಶ್ರೀ ಕೊಡಮಣಿತ್ತಾಯ ಸೇವಾ ವೃಂದ ಟ್ರಸ್ಟ್‌ನ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ರಂಜನಿ ದಿವಾಕರ್ ಮಾಡಾಯಿ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.
ಭಜನಾ ಗುರು ಶ್ರೀ ಅಶೋಕ್ ನಾಯ್ಕ್ ಕಳಸಬೈಲು ಅವರ ಮಾರ್ಗದರ್ಶನದಲ್ಲಿ ತಂಡದ ಮಕ್ಕಳು ಭಕ್ತಿ, ಸಂಸ್ಕಾರ, ಶಿಸ್ತು ಹಾಗೂ ಒಗ್ಗಟ್ಟಿನೊಂದಿಗೆ ಭಜನಾ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಮಕ್ಕಳಿಗೆ ನಿರಂತರ ತರಬೇತಿ ಹಾಗೂ ಪ್ರೋತ್ಸಾಹ ನೀಡುತ್ತಿರುವ ಅಶೋಕ್ ನಾಯ್ಕ್ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ ಅಳಕೆ, ಉಪಾಧ್ಯಕ್ಷರಾದ ಶ್ರೀ ಸದಾನಂದ ಕುಲಾಲ್, ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ್, ಕಾರ್ಯದರ್ಶಿ ಶ್ರೀ ದಿಲೀಪ್ ಕುಮಾರ್ ಮಡಕುಂಜ, ಕೇಸರಿ ಫ್ರೆಂಡ್ಸ್ ಕಲ್ಕೂರಿ ಪದವು ಅಧ್ಯಕ್ಷರಾದ ಶ್ರೀ ರತ್ನಾಕರ್ ಪೂಜಾರಿ ಸೇರಿದಂತೆ ಟ್ರಸ್ಟ್ ಹಾಗೂ ಸಮಿತಿ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಮಕ್ಕಳ ಪೋಷಕರು ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಸಮವಸ್ತ್ರ ವಿತರಣೆಯಿಂದ ಮಕ್ಕಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಮತ್ತು ತಂಡದ ಒಗ್ಗಟ್ಟು ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗಳಲ್ಲಿ ತಂಡ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ.

Post a Comment

0 Comments

Advertisement