ಫ್ರೆಂಡ್ಸ್ ಕ್ಲಬ್ ಇರುವೈಲು 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಫ್ರೆಂಡ್ಸ್ ಕ್ಲಬ್ ಇರುವೈಲು 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ

ಮೂಡುಬಿದಿರೆ: ಫ್ರೆಂಡ್ಸ್ ಕ್ಲಬ್ ರಿ. ಇರುವೈಲು ವತಿಯಿಂದ ಆಯೋಜಿಸಿರುವ 15ನೇ ವರ್ಷದ
ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಕಟ್ಟಿರುವ  ನೂತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಟ್ಟಡವನ್ನು  ಮಿಜಾರು ಹರಿ–ಮೀನಾಕ್ಷಿ ದೋಟದ ಸುರೇಶ್ ಎಂ. ಶೆಟ್ಟಿ ಉದ್ಘಾಟಿಸಿದರು.

ಇರುವೈಲು ದೇವಸ್ಥಾನದ ಪ್ರಧಾನ ಅರ್ಚಕ ಐ. ರಾಘವೇಂದ್ರ ಭಟ್ ಆಶೀರ್ವಚನ ನೀಡಿದರು. ಇದೇ ಸಂದರ್ಭ ಕುಮಾರ್ ಎಲೆಕ್ಟ್ರಾನಿಕ್ಸ್ನ ಮಾಲಕ ಕುಮಾರ್ ಪೂಜಾರಿ ಇರುವೈಲು ಹಾಗೂ ಕಂಬಳ ಕೋಣಗಳ ಯಜಮಾನ ಚಂದ್ರಹಾಸ ಸನಿಲ್ ಏರಿಮಾರು ಬರ್ಕೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಿಥುನ್ ಎಂ. ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಇರುವೈಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ, ಸದಸ್ಯರಾದ ಪ್ರದೀಪ್ ಶೆಟ್ಟಿ ಹಾಗೂ ದೀಪಾ ದಿನೇಶ್ ಬಟಾರ ಭಾಗವಹಿಸಿದ್ದರು.

ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಪೂಜಾರಿ, ಸ್ಥಾಪಕಾಧ್ಯಕ್ಷ ಪ್ರಶಾಂತ್ ಅಮೀನ್ ದೇವರಗುಡ್ಡೆ, ಲೋಕೇಶ್ ಆಚಾರ್ಯ ಕೊಪ್ಪಳ, ಗುರುಶರಣ್ ಕೆಂಪುಗುಡ್ಡೆ, ಪದ್ಮನಾಭ ಪೂಜಾರಿ ಕನಡ್ರಕೋಡಿ, ಪ್ರದೀತಾ ಅಶೋಕ್ ಪೂಜಾರಿ ದಂಬೆಕೋಡಿ, ವಸಂತ ಸಾಲ್ಯಾನ್ ಸೂಂತ್ಲಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಪ್ರತಿಭಾ ಶೆಟ್ಟಿ ಹಾಗೂ ಸುರೇಖಾ ಶೆಟ್ಟಿ, ಕೆಡಿಪಿ ಸದಸ್ಯ ಪ್ರವೀಣ್ ಪೂಜಾರಿ ಪಲ್ಕೆ ಮತ್ತು ವಕೀಲರಾದ ಯಶೋಧರ ಪೂಜಾರಿ ಕನಡ್ರಕೋಡಿ ಉಪಸ್ಥಿತರಿದ್ದರು.

ಸಂತೋಷ್ ಪೂಜಾರಿ ಬಟಾರ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments

Advertisement