ಮೂಡುಬಿದಿರೆ : 2026-27 ನೇ ಸಾಲಿನ 'ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ'ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ಮಾಂಟ್ರಾಡಿ ಪೆಂಚಾರು ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಶ್ರೀವಾಣಿ ಅವರು ಆಯ್ಕೆಯಾಗಿದ್ದಾರೆ.
1996 ರಲ್ಲಿ ಸೇವೆಗೆ ಸೇರಿದ್ದ ಶ್ರೀವಾಣಿಯವರು 13 ವರ್ಷ ವಾಮದಪದವು ಚೆನ್ನೆತ್ತೋಡಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ,4 ವರ್ಷ ಬಂಟ್ವಾಳ ಮಂಡಾಡಿ ಸ.ಕಿ.ಪ್ರಾ.ಶಾಲೆಯಲ್ಲಿ, 8 ವರ್ಷ ಮೂಡುಬಿದಿರೆ ಕೊಡಂಗಲ್ಲು ಶಾಲೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಪೆಂಚಾರು ಶಾಲೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ವೃತ್ತಿಯ ಅವಧಿಯಲ್ಲಿ 8 ಬಾರಿ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ 5 ಬಾರಿ ರಾಜ್ಯಮಟ್ಟದ ಬಹುಮಾನವನ್ನು ಪಡೆದಿದ್ದಾರೆ.
ಶಿರ್ತಾಡಿಯ ನಿವಾಸಿಯಾಗಿರುವ ಇವರು ನಿವೃತ್ತ ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಅವರ ಪತ್ನಿ.

0 Comments