ಮೂಡುಮಾರ್ನಾಡು ಪ್ರೌಢಶಾಲಾ ಶಿಕ್ಷಕ ಜೋನ್ ರೊನಾಲ್ಡ್ ಡಿಸೋಜ ಅವರು ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಮೂಡುಮಾರ್ನಾಡು ಪ್ರೌಢಶಾಲಾ ಶಿಕ್ಷಕ ಜೋನ್ ರೊನಾಲ್ಡ್ ಡಿಸೋಜ ಅವರು ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ
 

ಮೂಡುಬಿದಿರೆ: ತಾಲೂಕಿನ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಜೋನ್ ರೊನಾಲ್ಡ್ ಡಿಸೋಜ ಅವರು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

1988ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇರುವೈಲು ಇಲ್ಲಿ ಸೇವೆಗೆ ಸೇರಿದ ಅವರು ಒಟ್ಟು 37 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಜೋನ್ ರೊನಾಲ್ಡ್ ಡಿಸೋಜ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇರುವೈಲು, ಮೂಡುಬಿದಿರೆ ಮೈನ್ ಹಾಗೂ ಕಿರಿಯ ಪ್ರಾಥಮಿಕ ಶಾಲೆ, ಗುತ್ತು ಕರಿಂಜೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

2005ರಲ್ಲಿ ಪ್ರೌಢಶಾಲಾ ಸಹಶಿಕ್ಷಕರಾಗಿ ಬಡ್ತಿ ಪಡೆದ ಅವರು, ಅದೇ ವರ್ಷದಿಂದ ಈವರೆಗೆ ಸರ್ಕಾರಿ ಪ್ರೌಢಶಾಲೆ, ಮೂಡುಮಾರ್ನಾಡು ಇಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರ ಸಂಪನ್ಮೂಲ ಕೇಂದ್ರ, ಮೂಡುಬಿದಿರೆ ಇಲ್ಲಿ ಮೂರು ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಟಾಲ್ಪ್, ಇ.ಎಲ್.ಸಿ., ಸಮಾಜ ವಿಜ್ಞಾನ ವಿಷಯ ಹಾಗೂ ಶಿಕ್ಷಕರ ಇತರ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿರುವ ಅವರು, ಸಮಾಜ ವಿಜ್ಞಾನ ವಿಷಯದಲ್ಲಿ ನಿಧಾನಗತಿಯ ಕಲಿಕೆಯ ಮಕ್ಕಳಿಗೆ ಅನುಕೂಲವಾಗುವಂತೆ ‘ಸಮಾಜ ಬಲು ಸುಲಭ’, ‘ಸವಿಸೂತ್ರಗಳು’, ‘ಸವಿಮೌಲ್ಯ’ ಸೇರಿದಂತೆ ಸಾಹಿತ್ಯವನ್ನು ರಚಿಸಿದ್ದಾರೆ.

ಕೋವಿಡ್ ರಜೆಯ ಸಂದರ್ಭದಲ್ಲಿ ಮಕ್ಕಳಿಗಾಗಿ ಆನ್‌ಲೈನ್ ರಸಪ್ರಶ್ನೆಗಳನ್ನು ರಚಿಸಿ ನಿರ್ವಹಿಸಿದ್ದಾರೆ. ಶೈಕ್ಷಣಿಕ ವೀಡಿಯೋಗಳಿಗಾಗಿ ಯೂಟ್ಯೂಬ್ ಚಾನಲ್ ರಚಿಸಿದ್ದು, ಪಾಠಬೋಧನೆಗೆ ಇ-ಕಂಟೆಂಟ್ ಸಿದ್ಧಪಡಿಸಿದ್ದಾರೆ. ಕಂಪ್ಯೂಟರ್ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಾಠಬೋಧನೆಯನ್ನೂ ನಡೆಸಿದ್ದಾರೆ.
ದಾನಿಗಳ ನೆರವಿನಿಂದ ಮಕ್ಕಳಿಗೆ ನೋಟ್ ಪುಸ್ತಕ, ಸ್ಕೂಲ್ ಐ.ಡಿ., ಧ್ವನಿವರ್ಧಕ, ಕುಡಿಯುವ ನೀರಿನ ಶೀತಲ ಯಂತ್ರ, ಊಟದ ಬಟ್ಟಲು, ಲೋಟ, ಬಿಸಿಯೂಟ ತಯಾರಿಕೆಗೆ ಮಿಕ್ಸಿ, ಕುಕ್ಕರ್ ಹಾಗೂ ಮಕ್ಕಳಿಗೆ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಸರ್ಕಾರಿ ಪ್ರೌಢಶಾಲೆ, ಮೂಡುಮಾರ್ನಾಡು ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ಒಂಬತ್ತು ವರ್ಷ ಶೇ.100 ಫಲಿತಾಂಶ ದಾಖಲಿಸಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಶೇ.100 ಫಲಿತಾಂಶ ದಾಖಲಿಸಿರುವ ತಾಲೂಕಿನ ಏಕೈಕ ಸರ್ಕಾರಿ ಪ್ರೌಢಶಾಲೆಯಾಗಿದೆ. ಜೋನ್ ರೊನಾಲ್ಡ್ ಡಿಸೋಜ ಬೋಧಿಸಿದ ಸಮಾಜ ವಿಜ್ಞಾನ ವಿಷಯದಲ್ಲಿಯೂ ಹಲವಾರು ವರ್ಷಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.

Post a Comment

0 Comments

Advertisement