ತಂತ್ರಜ್ಞಾನದ ಜತೆಗೆ ತತ್ವಜ್ಞಾನವನ್ನು ಬೆಳೆಸಿಕೊಳ್ಳಿ : ಒಡಿಯೂರು ಶ್ರೀಉದ್ಯಮಿ ಡಾ. ರಾಮಕೃಷ್ಣ ಆಚಾರ್ ಅವರಿಗೆ 'ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ' ಪ್ರದಾನ

ತಂತ್ರಜ್ಞಾನದ ಜತೆಗೆ ತತ್ವಜ್ಞಾನವನ್ನು ಬೆಳೆಸಿಕೊಳ್ಳಿ : ಒಡಿಯೂರು ಶ್ರೀ

ಉದ್ಯಮಿ ಡಾ. ರಾಮಕೃಷ್ಣ ಆಚಾರ್ ಅವರಿಗೆ 'ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ' ಪ್ರದಾನ
ಮೂಡುಬಿದಿರೆ : ಗತಿಗೆ ಮತಿ ನೀಡುವವಳು ಸರಸ್ವತಿ. ಯುವ ಜನತೆ ಒಗ್ಗಟ್ಟಾಗಬೇಕು ಮತ್ತು ತಂತ್ರಜ್ಞಾನದ ಜೊತೆಗೆ ತತ್ವಜ್ಞಾನವನ್ನು ಬೆಳೆಸಿಕೊಂಡರೆ ಬದುಕು ವಿಕಾಸವಾಗುತ್ತದೆ ಎಂದು  ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. 
ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕದಲ್ಲಿ ನಡೆಯುತ್ತಿರುವ 5ನೇ ವರ್ಷದ  ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಭಾಗವಹಿಸಿ ಆಶೀವ೯ಚನ ನೀಡಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಹಾಗೂ ಕ್ರಿಯಾಶಕ್ತಿ ನಮ್ಮಲ್ಲಿರ ಬೇಕಾಗಿದೆ ಎಂದರು. 

ಪ್ರಶಸ್ತಿ ಪ್ರದಾನ : ಅಂತರಾಷ್ಟ್ರೀಯ ಉದ್ಯಮಿ ಎಸ್ ಕೆ ಎಫ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಅವರಿಗೆ 'ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ' ಯನ್ನು ಪ್ರದಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಆಚಾರ್ ಅವರು ತನ್ನ ಕಂಪನಿಯ ಸಿ ಎಸ್ ಆರ್ ಫಂಡ್ ನಿಂದ ಪ್ರತಿವರ್ಷ ಸುಮಾರು 25 ಲಕ್ಷ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಸಿದ್ಧ.  ಊರವರು ಈ ಬಗ್ಗೆ ಸಮಿತಿಯನ್ನು ರಚಿಸಿಕೊಂಡು ಮೊತ್ತವನ್ನು ಬಳಸಿಕೊಳ್ಳಬೇಕು.  

  ಯುವ ಜನತೆ ಕೌಶಲಾಭಿವೃದ್ಧಿ, ಕೃಷಿ, ಹೈನುಗಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಬನ್ನಡ್ಕದಲ್ಲಿ ಸಂಜೀವಿನಿ ಗೋಧಾಮ ಮಾಡಿ ಏಳು ಸ್ತರದ ಕೃಷಿ ಚಟುವಟಿಕೆಗಳನ್ನು,  ಮೀನು, ಕುರಿ, ಕೋಳಿ, ಪಕ್ಷಿಗಳನ್ನು ಸಾಕುವುದು, ಕಾಂಪೋಸ್ಟ್ ಗೊಬ್ಬರ ರಚಿಸಿ ಸಾವಯವ ಕೃಷಿಗೆ ಉತ್ತೇಜಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಿದರು. 

 ಶಾರದೋತ್ಸವ ಟ್ರಸ್ಟ್ ಅಧ್ಯಕ್ಷ ದಯಾನಂದ ಪೈ ಸಭಾಧ್ಯಕ್ಷತೆ ವಹಿಸಿದ್ದರು. 

ಸನ್ಮಾನ : ನಿವೃತ್ತ  ದೈಹಿಕ ಶಿಕ್ಷಕ ಕಿಶೋರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಸಕ ಉಮಾನಾಥ ಎ ಕೋಟ್ಯಾನ್ ಮಾತನಾಡಿ ದಸರಾ ಹಿಂದೂ ಸಮಾಜದ ಚೈತನ್ಯವಾಗಿದೆ ಎಂದರು.
ಬಿಜೆಪಿ ಮುಖಂಡ ಸುದರ್ಶನ ಎಂ ಮಾತನಾಡಿ   ಶಾರದೋತ್ಸವದಂತಹ ಉತ್ಸವಗಳು ಮಾದರಿಯಾಗಿ ಮೂಡಿಬರುತ್ತಿದೆ ಎಂದು ಹೇಳಿದರು. 

ಉದ್ಯಮಿ ಶ್ರೀಪತಿ ಭಟ್,  ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು,  ಕೃಷಿಕ ರಮೇಶ್ ಶೆಟ್ಟಿ ಪಣರೊಟ್ಟು ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ, ಉದ್ಯಮಿ ದೋಟ ಸುರೇಶ್ ಶೆಟ್ಟಿ, ಬೋಳ ವಿಶ್ವನಾಥ ಕಾಮತ್, ಶ್ರೀ ಕ್ಷೇತ್ರ ಬನ್ನಡ್ಕ ಅನುವಂಶಿಕ ಮೊಕ್ತೇಸರರು ಸುಕುಮಾರ ಬಲ್ಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

 ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು ಸ್ವಾಗತಿಸಿದರು. ಶಾರದೋತ್ಸವ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರನ್ನು ಬಹುಮಾನದೊಂದಿಗೆ ಗೌರವಿಸಲಾಯಿತು. ಸತೀಶ್ ಹೊಸ್ಮಾರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments

Advertisement