ಪಣಪಿಲದ ಇಟಲ ಗೆಳೆಯರ ಬಳಗದ ಪದಾಧಿಕಾರಿ ಬದಲಾವಣೆ-ಅಧ್ಯಕ್ಷರಾಗಿ ದೀಕ್ಷಿತ್ ಪಣಪಿಲ, ಪ್ರ.ಕಾರ್ಯದರ್ಶಿಯಾಗಿ ಆಕಾಶ್ ಕಾಡೇಲು ಆಯ್ಕೆ

ಪಣಪಿಲದ ಇಟಲ ಗೆಳೆಯರ ಬಳಗದ ಪದಾಧಿಕಾರಿ ಬದಲಾವಣೆ-ಅಧ್ಯಕ್ಷರಾಗಿ ದೀಕ್ಷಿತ್ ಪಣಪಿಲ, ಪ್ರ.ಕಾರ್ಯದರ್ಶಿಯಾಗಿ ಆಕಾಶ್ ಕಾಡೇಲು ಆಯ್ಕೆ
ಸುಮಾರು 16 ವರ್ಷಗಳಿಂದ ಮೊಸರು ಕುಡಿಕೆ ಸಹಿತ ವಿವಿಧ ಸಂಘಟನಾತ್ಮಕ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಪಣಪಿಲ ಗ್ರಾಮದ ಶ್ರೀ ಇಟಲ ಗೆಳೆಯರ ಬಳಗ ಇದರ ನೂತನ ಅಧ್ಯಕ್ಷರಾಗಿ ದೀಕ್ಷಿತ್ ಪಣಪಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಕಾಡೇಲು ರವರು ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ನಡೆಯುವ ಮೊಸರು ಕುಡಿಕೆ ಉತ್ಸವವನ್ನು ಇಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಿದ್ದು ಈ ಬಾರಿ ಸಪ್ಟೆಂಬರ್ 06 ಆದಿತ್ಯವಾರದಂದು ನಡೆಯಲಿದೆ.

ಉಪಾಧ್ಯಕ್ಷರಾಗಿ ರಾಮಪ್ಪ ಮೂಲ್ಯ ಹಾಗೂ ವಿನಯ್ ಹೂಲ್ದಂಡ, ಜೊತೆ ಕಾರ್ಯದರ್ಶಿಗಳಾಗಿ ಮನೋಜ್ ನಿರ್ಪರಿ ಹಾಗೂ ಸ್ವಸ್ತಿಕ್ ನಾಪದಪಾಡಿ, ಕ್ರೀಡಾ ಕಾರ್ಯದರ್ಶಿ ಜೊತೆ ಕ್ರೀಡಾ‌ದರ್ಶಿಯಾಗಿ, ಶಶಿಧರ ದರ್ಖಾಸು ಹಾಗೂ ಶೈಲೇಶ್ ಪಣಪಿಲ, ಕೋಶಾಧಿಕಾರಿಯಾಗಿ ಸುನಿಲ್ ಗುಡ್ಡಲ್ ಪಲ್ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಮೀಳಾ ಪಿ.ಕೋಟ್ಯಾನ್ ಹಾಗೂ ಅಕ್ಷಿತಾ ಸಚಿನ್ ರವರು ಆಯ್ಕೆಯಾಗಿದ್ದಾರೆ.

Post a Comment

0 Comments

Advertisement