ಕೇರ್ ಚಾರಿಟೇಬಲ್ ಟ್ರಸ್ಟ್‌ನಿಂದ ವಾಲ್ಪಾಡಿಯ ಬಡ ಕುಟುಂಬಕ್ಕೆ ‘ಸಂಗಾತ್’ ಮನೆ ಹಸ್ತಾಂತರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಕೇರ್ ಚಾರಿಟೇಬಲ್ ಟ್ರಸ್ಟ್‌ನಿಂದ ವಾಲ್ಪಾಡಿಯ ಬಡ ಕುಟುಂಬಕ್ಕೆ  ‘ಸಂಗಾತ್’ ಮನೆ ಹಸ್ತಾಂತರ

ಮೂಡುಬಿದಿರೆ: ವಿವಿಧ ದಾನಿಗಳ ಸಹಕಾರದೊಂದಿಗೆ ಕೇರ್ ಚಾರಿಟೇಬಲ್ ಟ್ರಸ್ಟ್ ವಾಲ್ಪಾಡಿಯ ಬಡ ಕುಟುಂಬಕ್ಕೆ ನಿಮಿ೯ಸಿರುವ 11ನೇ ನೂತನ ಗೃಹ ‘ಸಂಗಾತ್’ನ ಹಸ್ತಾಂತರ ಹಾಗೂ ಗೃಹ ಪ್ರವೇಶ ಕಾರ್ಯಕ್ರಮ ಭಾನುವಾರ ನಡೆಯಿತು.
ಬಡ ಕುಟುಂಬದ ಬೌತೀಸ್ ಮತ್ತು ಬೇಬಿ ರೊಡ್ರಿಗಸ್ ಅವರಿಗೆ ಮನೆಯ ಕೀಯನ್ನು ಹಸ್ತಾಂತರಿಸಲಾಯಿತು.

ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ಧರ್ಮಗುರು ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಮನೆ ಹಸ್ತಾಂತರ ನೆರವೇರಿಸಿ ಮಾತನಾಡಿ ಮನೆ ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಯಾಗಿದೆ. ‘ಸಂಗಾತ್’ ಎಂಬ ಹೆಸರಿನ ಮನೆ ಬಡ ಕುಟುಂಬವೊಂದಕ್ಕೆ ದೊರೆತಿರುವುದು ಸಂತೋಷದ ಸಂಗತಿ ಎಂದರು.  ಹಲವು ಒಳ್ಳೆಯ ಮನಸ್ಸಿನ ಜನರ ಸಹಕಾರ ಹಾಗೂ ದೇವರ ಆಶೀರ್ವಾದದಿಂದ ಈ ಮನೆ ನಿರ್ಮಾಣವಾಗಿದೆ ಎಂದು ಹೇಳಿದರು.
ಕಷ್ಟದಲ್ಲಿರುವವರು, ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದೇ ನಿಜವಾದ ಮಾನವೀಯತೆ ಮತ್ತು ಧರ್ಮ. ಧರ್ಮ, ಜಾತಿ ಭೇದವಿಲ್ಲದೆ ಮನೆ ಇಲ್ಲದವರಿಗೆ ಸೂರು ಒದಗಿಸುವ ಸೇವೆ ಶ್ಲಾಘನೀಯ. 

ಕೇರ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅನಿಲ್ ಮೆಂಡೋನ್ಸಾ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರಿಗೆ ಮನೆ ಕಟ್ಟಿಕೊಡುವ ಯೋಜನೆಯು ಸರ್ವಧರ್ಮದ ದೇವರ ಅನುಗ್ರಹ ಹಾಗೂ ದಾನಿಗಳ ಸಹಕಾರದಿಂದ 12 ಮನೆಗಳನ್ನು ಕಟ್ಟಿಕೊಡುವತ್ತ ಸಾಗಿದೆ. ಟೀಕೆಗಳನ್ನು  ಮೀರಿ ಮತ್ತಷ್ಟು ಕುಟುಂಬಗಳಿಗೆ ಆಸರೆಯಾಗುವುದೇ ನಮ್ಮ ಧ್ಯೇಯ ಎಂದು ಹೇಳಿದರು.

ಉದ್ಯಮಿ ವಿಲ್ಸನ್ ಫೆರ್ನಾಂಡಿಸ್, ರಾಜಕೀಯ ಮುಖಂಡ ಜಗದೀಶ್ ಅಧಿಕಾರಿ, ಕ್ರೈಸ್ತ ವಾರ್ಡ್ ಗುರಿಕಾರ ಉದಯ್ ಪಿಂಟೊ, ಯೂಟ್ಯೂಬರ್ ವಿಖಿಲ್ ಸಾಲ್ಯಾನ್, ಯೂಟ್ಯೂಬರ್ ಲೀಸಾ ಹಾಗೂ ಸಮಾಜ ಸೇವಕಿ ರಜನಿ ಶೆಟ್ಟಿ ಉಪಸ್ಥಿತರಿದ್ದರು.
ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು. ರೋಜ್ಲಿನ್ ರೊಡ್ರಿಗಸ್ ವಂದಿಸಿದರು.

Post a Comment

0 Comments

Advertisement