ತಾಲೂಕಿನ 34 ವಿದ್ಯಾರ್ಥಿಗಳಿಗೆ ರೂ.96,02,000 ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ತಾಲೂಕಿನ 34 ವಿದ್ಯಾರ್ಥಿಗಳಿಗೆ ರೂ.96,02,000 ಸುಜ್ಞಾನ ನಿಧಿ ಶಿಷ್ಯವೇತನ   ಮಂಜೂರಾತಿ ಪತ್ರ ವಿತರಣೆ
 

ಮೂಡುಬಿದಿರೆ : ಮಹಾವೀರ ಕಾಲೇಜಿನ ಸಭಾಭವನದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಂಗಲ್ಲು ಒಕ್ಕೂಟದ ವತಿಯಿಂದ ನಡೆದ ತ್ರೈಮಾಸಿಕ ಸಭೆಯಲ್ಲಿ  ಮೂಡುಬಿದಿರೆ ತಾಲೂಕಿನ ಸ್ವಸಹಾಯ ಸಂಘದ ಸದಸ್ಯರ ಹೆಣ್ಣುಮಕ್ಕಳ  ಉನ್ನತ ಶಿಕ್ಷಣದ ಪ್ರೋತ್ಸಾಹವಾಗಿ 34 ವಿದ್ಯಾರ್ಥಿಗಳಿಗೆ ಕ್ಷೇತ್ರದಿಂದ ಸುಜ್ಞಾನ ನಿಧಿ ಶಿಷ್ಯವೇತನ  ರೂ.96,02,000 ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. 

 ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ಧನಂಜಯ ಅವರು ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಸುಜ್ಞಾನ ನಿಧಿಯ ಬಗ್ಗೆ ಮಾಹಿತಿ ನೀಡಿ ರಾಜ್ಯದಲ್ಲಿ ಒಟ್ಟು 137165 ವಿದ್ಯಾರ್ಥಿಗಳಿಗೆ ರೂ.18602000 ಕೋ. ಮಂಜೂರಾತಿ ಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. 
 ಒಕ್ಕೂಟದ ಅಧ್ಯಕ್ಷೆ ಪ್ರೇಮಶ್ರೀ ಕಲ್ಲಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
 ಮೇಲ್ವಿಚಾರಕ ಚಂದ್ರಹಾಸ್, ಒಕ್ಕೂಟದ ಉಪಾಧ್ಯಕ್ಷ ನವೀನ್ ಶೆಟ್ಟಿ,ಖಜಾಂಜಿ ಯತೀಶ್ ಕೋಟ್ಯಾನ್, ಸೇವಾ ಪ್ರತಿನಿಧಿ ಮಮತಾ, ಸುವಿಧ  ಸಹಾಯಕಿ ಜಯಶ್ರೀ ಈ ಸಂದಭ೯ದಲ್ಲಿದ್ದರು.

 25 ವಷ೯ ತುಂಬಿದ ಭಗವತೀ ತಂಡಕ್ಕೆ ಒಕ್ಕೂಟದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. 
 ಕಾಯ೯ದಶಿ೯ ಹರೀಶ್ ಕುಲಾಲ್ ಒಕ್ಕೂಟ ವರದಿ ಮಂಡಿಸಿದರು.

Post a Comment

0 Comments

Advertisement