ಮೂಡುಬಿದಿರೆ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಯುವಮೋರ್ಚಾ,ಮೂಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ವಿದ್ಯಾಗಿರಿಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ “ಬೃಹತ್ ರಕ್ತದಾನ ಶಿಬಿರ”ದಲ್ಲಿ 50 ಯುನಿಟ್ ರಕ್ತವನ್ನು ಸಂಗ್ರಹ ಮಾಡಲಾಗಿದೆ.
ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯಕ್ಕೆ ಬಂದು ಸಮಾಜಸೇವೆಯನ್ನು ಮಾಡಲು ಆರಂಭಿಸಿ 25 ವರುಷಗಳು ಕಳೆದಿವೆ. ಅವರ ಹುಟ್ಟುಹಬ್ಬದ ಸಂದಭ೯ದಲ್ಲಿ ಯುವ ಮೋಚಾ೯ದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಿರುವ ಉತ್ತಮ ಕಾಯ೯ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ಉಪಾಧ್ಯಕ್ಷರುಗಳಾದ ಸಚಿನ್ ಪಣಪಿಲ ಮತ್ತು ಜೀವಾಂಧರ್ ಶೆಟ್ಟಿ, ಒಬಿಸಿ ಮೋಚಾ೯ದ ಅಧ್ಯಕ್ಷ ಪ್ರದೀಪ್ ವಾಲ್ಪಾಡಿ, ಎಸ್. ಸಿ. ಮೋಚಾ೯ದ ಅಧ್ಯಕ್ಷ ಜಗನ್ನಾಥ ಬೆಳುವಾಯಿ, ರೈತ ಮೋಚಾ೯ದ ಅಧ್ಯಕ್ಷ ರಾಜೇಶ್ ಅಮೀನ್, ಆಳ್ವಾಸ್ ಹೆಲ್ತ್ ಸೆಂಟರ್ ನ ಸಿಬಂದಿ ರಾಜೇಶ್ ಪ್ರಮುಖರಾದ ಹೇಮನಾಥ ಶೆಟ್ಟಿ, ಶೋಬೀಂದ್ರ, ಕಸ್ತೂರಿ ಪಂಜ, ಪೂಣಿ೯ಮಾ ಹಳೆಯಂಗಡಿ, ಗೌತಮ್ ರೈ ಈ ಸಂದಭ೯ದಲ್ಲಿದ್ದರು.
ಯುವ ಮೋಚಾ೯ದ ಕಾಯ೯ದಶಿ೯ ಭರತ್ ಶೆಟ್ಟಿ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು.

0 Comments