ಸೆ.೨೬ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ

ಸೆ.೨೬ರಿಂದ ಮೂಡುಬಿದಿರೆಯಲ್ಲಿ ಕಂಬಳ ಅಕಾಡೆಮಿಯಿಂದ ಓಟಗಾರರಿಗೆ ತರಬೇತಿ ಶಿಬಿರ ಆರಂಭ  

ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಮಿಯಾರು ಕಾರ್ಕಳ ಇದರ ವತಿಯಿಂದ  ಕಡಲಕೆರೆಯ ಸೃಷ್ಠಿ ಗಾರ್ಡನಲ್ಲಿ ನಡೆಯುವ ಏಳನೇ ವಷ೯ದ ಕಂಬಳ ತರಬೇತಿ ಶಿಬಿರವು ಸೆ.೨೬ರಿಂದ ಹತ್ತು ದಿನಗಳವರೆಗೆ  ನಡೆಯಲಿದೆ ಎಂದು ಕಂಬಳ ಅಕಾಡಮಿಯ ಸಂಚಾಲಕರಾದ ಗುಣಪಾಲ ಕಡಂಬ ಹೇಳಿದರು.

ಅವರು ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ೧೧ ಜನ ಸಮಾನ ಮನಸ್ಕ ಕೃಷಿಕರು ಸೇರಿಕೊಂಡು ೨೦೧೧ರಲ್ಲಿ ಶಿರ್ಲಾಲು ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಕಂಬಳ ಅಕಾಡಮಿಯನ್ನು ಆರಂಭಿಸಲಾಯಿತು. ಮಿಯಾರಿನಲ್ಲಿ ಐದು ವರ್ಷ ತರಬೇತಿ ಶಿಬಿರ ನಡೆದು ಮೂಡುಬಿದಿರೆಯ ಕಡಲಕೆರೆಯಲ್ಲಿ ಎರಡನೇ ವರ್ಷದ ಶಿಬಿರ ನಡೆಯಲಿದೆ ಎಂದರು. 
ಸೆ.೧೨ಕ್ಕೆ  ಮೊದಲ ಸುತ್ತಿನ ಆಯ್ಕೆ ನಡೆದರೆ ರಾಷ್ಟ್ರೀಯ ತರಬೇತುದಾರರು ಎರಡನೇ ಸುತ್ತಿನಲ್ಲಿ ಅಂತಿಮ ೪೦ ಮಂದಿಯನ್ನು ಆಯ್ಕೆ ಮಾಡಲಿದ್ದಾರೆ ಎಂದರು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ಸೆ.೨೬ರಿಂದ ೧೦ ದಿನಗಳ ಕಾಲ ಕಂಬಳ ಕ್ಷೇತ್ರದ ವಿವಿಧ ಅನುಭವಿಗಳಿಂದ ತರಬೇತಿ ನೀಡಲಾಗುವುದು. ಕೋಣಗಳನ್ನು ಓಡಿಸುವುದು, ಕೋಣಗಳ ಸಾಕಣೆ, ಆಹಾರ ಪದ್ದತಿ, ಹಗ್ಗ ನೇಯ್ಗೆ, ಯೋಗ, ಆತ್ಮಸ್ಥೆಯ೯ ಹೆಚ್ಚಿಸಲು ಮಾನಸಿಕ ತಜ್ಞರಿಂದ ಮಾಹಿತಿ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಲಿದೆ ಎಂದರು. 
ಕಂಬಳ ಕ್ಷೇತ್ರಕ್ಕೆ ಮಹಿಳೆಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರಿಗೆ ತೀರ್ಪುಗಾರರು ಹಾಗೂ ಉದ್ಘೋಷಕರಾಗಿ ಕಾರ‍್ಯನಿರ್ವಹಿಸುವ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಗೊಳಪಡುವ ೧೮ ವರ್ಷ ಮೇಲ್ಪಟ್ಟ ಆಸಕ್ತರು ಸ್ಥಳದಲ್ಲೆ ತಮ್ಮ ಹೆಸರು ನೋಂದಾಯಿಸಬಹುದು ಎಂದರು.  

ಕಂಬಳ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನಮ್ಮ ಕಂಬಳ ಅಕಾಡಮಿಗೆ ೨೦೧೭ರಲ್ಲಿ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಕ್ರೀಡಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು. 

ಅಕಾಡಮಿಯ ಮೊದಲ ಬ್ಯಾಚ್‌ನ ಶಿಬಿರಾರ್ಥಿ, ಓಟಗಾರ ಶ್ರೀನಿವಾಸ ಗೌಡ ಎರಡನೇ ಬ್ಯಾಚ್‌ನ ಶಿಬಿರಾರ್ಥಿ, ಓಟಗಾರ ಪಣಪಿಲ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.

Post a Comment

0 Comments

Advertisement