63 ನೇ ವರ್ಷದ ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವ :

63 ನೇ ವರ್ಷದ ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವ :

 14 ರಿಂದ 18 ರ ವರೆಗೆ ವಿವಿಧ ಧಾಮಿ೯ಕ ಮತ್ತು ಸಾಂಸ್ಕೃತಿಕ ಕಾಯ೯ಕ್ರಮಗಳು
 
‌ ಮೂಡುಬಿದಿರೆ :ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್, ಮೂಡುಬಿದಿರೆ ವತಿಯಿಂದ 63 ನೇ ವರ್ಷದ ಮೂಡುಬಿದಿರೆ ಶ್ರೀ ಗಣೇಶೋತ್ಸವವು ಸೆ.14 ರಿಂದ 18 ರ ವರೆಗೆ ಧಾಮಿ೯ಕ ಹಾಗೂ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ನಾರಾಯಣ ಪಿ.ಎಂ.ಅವರು ತಿಳಿಸಿದರು.

ಅವರು ಗುರುವಾರ ಸಮಾಜ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಗಣೇಶೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದೆ, ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದಿದೆ. 14ರಿಂದ ಧಾಮಿ೯ಕ, ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ಮಾಡಿ ರಾಜ್ಯದಲ್ಲೇ ಮಾದರಿ ಉತ್ಸವವನ್ನಾಗಿ ಮಾಡುವ ಉದ್ದೇಶ ನಮ್ಮದು ಎಂದು ಅವರು ಹೇಳಿದರು.
      ಸೆ. 14ರಂದು ಬೆಳಿಗ್ಗೆ ದ. ಕ. ಜಿಲ್ಲಾಧಿಕಾರಿ ದಶ೯ನ್ ಹೆಚ್. ವಿ ಗಣೇಶೋತ್ಸವವನ್ನು ಉದ್ಘಾಟಿಸಲಿದ್ದು, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವೇದಮೂತಿ೯ ಈಶ್ವರ್ ಭಟ್ ಆಲಂಗಾರು ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ ಪೂಜೆ, ಗಣಹೋಮ ನೆರವೇರಿಸಲಿದ್ದಾರೆ. 

  ಲೋಕ ಕಲ್ಯಾಣಾಥ೯ವಾಗಿ ಸೆ. 15 ಮತ್ತು 16ರಂದು ಮುಡಿ ಅಪ್ಪ ಸೇವೆ ನಡೆಯಲಿದೆ. 

ಸೆ. 17ರಂದು ಬೆಳಿಗ್ಗೆ ಲೋಕ ಕಲ್ಯಾಣಾಥ೯ವಾಗಿ ಅಥವ೯ಶ್ರೀಷ೯ ಗಣಯಾಗ ನಡೆಯಲಿದೆ. 

  ಸಂಜೆ 4.30ರಿಂದ ಧಾಮಿ೯ಸಭೆ ಮತ್ತು ಬಹುಮಾನ ವಿತರಣೆ ಕಾಯ೯ಕ್ರಮ ನಡೆಯಲಿದ್ದು, ನಾರಾಯಣ ಪಿ. ಎಂ. ಅಧ್ಯಕ್ಷತೆಯಲ್ಲಿ ಆಳ್ವಾಸ್ ಪ. ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ರಾಮ್ ಪ್ರಸಾದ್ ಕಾಂಚೋಡು ಧಾಮಿ೯ಕ ಉಪನ್ಯಾಸ ನೀಡಲಿದ್ದಾರೆ. ದ. ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಶಹಶೀಲ್ದಾರ್ ಶ್ರೀಧರ ಎಸ್. ಮುಂದಲಮನಿ, ಅರಣ್ಯಾಧಿಕಾರಿ ಕಿರಣ್ ಕುಮಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಅಪರಾಹ್ನ ಪ್ರತಿದಿನ ಬೆಳಿಗ್ಗೆ- ಸಂಜೆ ಉಪಹಾರ,ಮಧ್ಯಾಹ್ನ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ, ಐದನೇ ದಿನ 7-30 ಕ್ಕೆ ವಿಸರ್ಜನಾ ಪೂಜೆ ಮಾಡಿ 8 ಗಂಟೆಗೆ ವಿಸರ್ಜನಾ ಮೆರವಣಿಗೆ ಪ್ರಾರಂಭಿಸಿ ಹನ್ನೆರಡು ಗಂಟೆಯೊಳಗೆ ವಿಸರ್ಜನೆ ಮಾಡಲಿದ್ದೇವೆ ಎಂದ ಅವರು ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುವ ಮೂಲಕ ಸಮಯಕ್ಕೆ ಮಹತ್ವವನ್ನು ನೀಡಲಿದ್ದೇವೆ ಎಂದರು.
    ಪ್ರತಿದಿನ ಸುಮಾರು ಹತ್ತು ಸಾವಿರದಷ್ಟು ಜನರು ಭಾಗವಹಿಸುವ ನಿರೀಕ್ಷೆಯಿದೆ, ಸರ್ವಧರ್ಮೀಯರೂ ಪಾಲ್ಗೊಳ್ಳುವ ಉತ್ಸವ ಇದಾಗಿದ್ದು ಅನ್ಯಧಮಿ೯ಯರು ಈಗಾಗಲೇ ಈಗಾಗಲೇ ದೇಣಿಗೆ ನೀಡಿದ್ದಾರೆ, ಸರ್ವರೂ ಸಹಕಾರ ನೀಡುತ್ತಾ ಬಂದಿದ್ದಾರೆ, ಈ ಪರಂಪರೆ ಮುಂದುವರಿಯಬೇಕೆಂದು ಅವರು ಹೇಳಿದರು.
   ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಉಪಾಧ್ಯಕ್ಷ ರಾಜಾರಾಮ್ ನಾಗರಕಟ್ಟೆ,ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಕೆ.ಶ್ರೀಪತಿ ಭಟ್,ಕುಲದೀಪ ಎಂ,ಸಾಂಸ್ಕೃತಿಕ ಸ್ಪರ್ಧೆ ಮತ್ತು ಕಾರ್ಯಕ್ರಮಗಳ ಸಂಚಾಲಕರಾದ ಯತಿರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments

Advertisement