ಪ್ರಧಾನಿ ನರೇಂದ್ರ ಮೋದಿ ಅವರ ಸಾವ೯ಜನಿಕ ಸೇವೆಗೆ 25ರ ಸಂಭ್ರಮ : ಸೆ. 17ರಿಂದ ಅ. 17ರವರೆಗೆ *"ಆಶೀರ್ವಾದ ದೀಪ"* ಅಭಿಯಾನ
ಮೂಡುಬಿದಿರೆ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ಸೆ. 17ರಿಂದ ಅ.17 ವರೆಗಿನ ಅಭಿಯಾನದಲ್ಲಿ *"ಆಶೀರ್ವಾದ ದೀಪ"* ಪ್ರತಿ ಬೂತಿನಲ್ಲಿ ಪ್ರತಿಯೊಂದು ಕುಟುಂಬವು ದೀಪ ಬೆಳಗಿಸುವ ಮೂಲಕ ಆಚರಿಸುವಂತೆ ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್
ತಿಳಿಸಿದ್ದಾರೆ.
ಪ್ರಮುಖ 13 ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈ ಪೈಕಿ ಪ್ರಥಮ ಕಾರ್ಯಕ್ರಮವಾಗಿ
ದೀಪ ಬೆಳಗಿಸುವ ಕಾಯ೯ಕ್ರಮವನ್ನು ಎಲ್ಲಾ ಬೂತಿನಲ್ಲಿಯೂ ಯಶಸ್ವಿಗೊಳಿಸುವಂತೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ /ಕಾರ್ಯದರ್ಶಿ/ಪ್ರಭಾರಿ, ಶಕ್ತಿಕೇಂದ್ರ ಪ್ರಮುಖರು ಹಾಗೂ ಪಕ್ಷದ ಅನನ್ಯ ಜವಾಬ್ದಾರಿಯುತ ಪ್ರಮುಖರಲ್ಲಿ ಪುತ್ರನ್ ಅವರು ವಿನಂತಿಸಿದ್ದಾರೆ.
ವಿಶೇಷವಾಗಿ ಪ್ರತಿ ಬೂತಿನಲ್ಲಿಯೂ ಕನಿಷ್ಠ 100 ಮನೆಗಳಲ್ಲಿ ಈ ಕಾರ್ಯಕ್ರಮ ನಡೆಯುವಂತೆ ಪ್ರಮುಖರು ನೋಡಿಕೊಳ್ಳುವಂತೆ ವಿನಂತಿಸಿದ್ದಾರೆ.
*

0 Comments