ಕೇಮಾರು : ಮಣ್ಣು ತುಂಬಿದ ಬೃಹತ್ ಗಾತ್ರದ ಲಾರಿಗಳ ಸಂಚಾರ, ಮಣ್ಣಿನ ಕೋರೆಗಳನ್ನು ಸ್ಥಗಿತಗೊಳಿಸುವಂತೆ ಕೇಮಾರು ಹಿತರಕ್ಷಣಾ ವೇದಿಕೆ ಆಗ್ರಹ
ಮೂಡುಬಿದಿರೆ : ಪಾಲಡ್ಕ ಗ್ರಾಮದ ಕೇಮಾರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣ್ಣಿನ ಕೋರೆ ಹಾಗೂ ಹೊರರಾಜ್ಯಗಳಿಗೆ ಮಣ್ಣು ಸಾಗಿಸುವ ಬೃಹತ್ ಲಾರಿಗಳ ಸಂಚಾರದಿಂದ ತೊಂದರೆಯಾಗುತ್ತಿರುವುದರಿಂದ ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಕೇಮಾರು ಹಿತರಕ್ಷಣಾ ವೇದಿಕೆಯು ತಹಶೀಲ್ದಾರ್ , ಗ್ರಾಮ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸೋಮವಾರ ಮನವಿ ನೀಡಿದೆ.
ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರಿನ ಆಲಿಸ್ ಸೆರಾವೊ,ಸೈಮನ್ ಕೊಟ್ಟೆರೊ ಎಂಬವರಿಗೆ ಸೇರಿದ ಸುಮಾರು ಎಕರೆ ಜಾಗದಲ್ಲಿ ಅಯೋಧ್ಯಾ ಕಾಪೋ೯ರೇಷನ್ ಸಂಸ್ಥೆಯು ಮಣ್ಣಿನ ಕ್ವಾರಿಯನ್ನು ನಡೆಯುತ್ತಿದೆ.ಇಲ್ಲಿಂದ ಮಣ್ಣು ತುಂಬಿಕೊಂಡು ಹೋಗುವ ಬೃಹತ್ ಗಾತ್ರದ ಲಾರಿಗಳಿಂದ ಕೇಮಾರು- ಮೂಡುಬಿದಿರೆ ರಸ್ತೆ ಸಂಪೂರ್ಣ ಲಗಾಡಿ ಹೋಗಿದೆ, ಬೃಹತ್ ಲಾರಿಗಳ ಚಾಲಕರು ಊರಿನ ಕೆಲವು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದೆ ಉದ್ಧಟತನದಿಂದ ವರ್ತಿಸುವುದು , ಈ ಬೃಹತ್ ವಾಹನಗಳ ಸಂಚಾರದಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನಗಳಿಗೆ ಸಮಸ್ಯೆಯಾಗುತ್ತಿದೆ, ಆದುದರಿಂದ ಊರಿಗೆ ಅನ್ಯಾಯ ಮಾಡುವ ಇಲ್ಲಿನ ಮಣ್ಣಿನ ಕ್ವಾರಿಯನ್ನು ಸ್ಥಗಿತಗೊಳಿಸಿ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನೂ ಕೂಡಲೇ ನಿಲ್ಲಿಸುವಂತೆ ಆದೇಶಿಸಬೇಕೆಂದು ಕೇಮಾರು ಹಿತರಕ್ಷಣಾ ವೇದಿಕೆ ಮನವಿಯಲ್ಲಿ ಆಗ್ರಹಿಸಿದೆ.

0 Comments