ಆಳ್ವಾಸ್ ನುಡಿಸಿರಿ–ವಿರಾಸತ್: ಎರಡನೇ ಪೂರ್ವಭಾವಿ ಸಭೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಆಳ್ವಾಸ್ ನುಡಿಸಿರಿ–ವಿರಾಸತ್: ಎರಡನೇ ಪೂರ್ವಭಾವಿ  ಸಭೆ
ಸಾಹಿತ್ಯ–ಸಂಸ್ಕೃತಿ, ಯುವಶಕ್ತಿ ಹಾಗೂ ಸಮಕಾಲೀನ ಚಿಂತನೆಗೆ ಆದ್ಯತೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾದ ಆಳ್ವಾಸ್ ನುಡಿಸಿರಿ–ವಿರಾಸತ್‌ನ್ನು ಅರ್ಥಪೂರ್ಣ ಹಾಗೂ ವೈವಿಧ್ಯಮಯವಾಗಿ ರೂಪಿಸುವ ನಿಟ್ಟಿನಲ್ಲಿ ಹಂಸನಗರದ ಶೋಭಾ ಅತಿಥಿಗೃಹದಲ್ಲಿ ಭಾನುವಾರ ಎರಡನೇ ಹಂತದ ಪೂರ್ವಭಾವಿ ಸಭೆ ನಡೆಯಿತು.
 
ಸಭೆಯಲ್ಲಿ ಕಾರ್ಯಕ್ರಮದ ಸಮಗ್ರ ರೂಪುರೇಷೆ, ವೇದಿಕೆ ಹಾಗೂ ಕಾರ್ಯಕ್ರಮಗಳ ನಿರ್ವಹಣೆಯ ಕುರಿತು ಚರ್ಚಿಸಲಾಯಿತು.
ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ವಿಸ್ತçತ ಪರಿಚಯವನ್ನು ಸಾಹಿತ್ಯ–ಸಾಂಸ್ಕೃತಿಕ ಆಸಕ್ತರಿಗೆ ಒದಗಿಸುವ ಉದ್ದೇಶದಿಂದ ವಿವಿಧ ಪ್ರದರ್ಶನಗಳು, ಮೇಳಗಳು, ಸಂವಾದಗಳು, ಗೋಷ್ಠಿಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ರೂಪುರೇಷೆ ಸಿದ್ಧಪಡಿಸಲಾಯಿತು. ಹಿರಿಯ ವಿದ್ವಾಂಸರು, ಸಾಹಿತಿಗಳು, ಕಲಾವಿದರು, ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಜ್ಞಾನ ಮತ್ತು ಅನುಭವದ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಆಶಯವನ್ನು ಹೊಂದಲಾಗಿದೆ. ಹೊಸ ತಲೆಮಾರಿನೊಂದಿಗೆ ಕನ್ನಡದ ಸಾಹಿತ್ಯ–ಸಾಂಸ್ಕೃತಿಕ ಪರಂಪರೆಯನ್ನು ಬೆಸೆಯುವ ಮೂಲಕ ಭವಿಷ್ಯದ ಚಿಂತನೆಗೆ ದಾರಿ ಮಾಡಿಕೊಡುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.

ಬಾಕ್ಸ್-01
ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಗಳನ್ನು ಕೇವಲ ಸಾಹಿತ್ಯ–ಸಾಂಸ್ಕೃತಿಕ ಅಭಿವ್ಯಕ್ತಿಗೆ ಸೀಮಿತಗೊಳಿಸದೆ, ಸಮಕಾಲೀನ ಸಮಾಜದ ಚಿಂತನೆಗಳು, ಬದಲಾದ ಕಾಲಘಟ್ಟದ ಸವಾಲುಗಳು ಹಾಗೂ ಹೊಸ ತಲೆಮಾರಿನ ಆಶಯಗಳಿಗೆ ಸ್ಪಂದಿಸುವ ವೇದಿಕೆಯಾಗಿ ರೂಪಿಸುವ ಆಶಯ ಹೊಂದಲಾಗಿದೆ. ವಿಶೇಷವಾಗಿ ಸಾಹಿತ್ಯಾಸಕ್ತರು ಮತ್ತು ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಳ್ಳುವ ಮೂಲಕ ಅವರ ಪ್ರತಿಭೆ, ಚಿಂತನೆ ಮತ್ತು ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ- ಡಾ ಎಂ ಮೋಹನ ಆಳ್ವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ನುಡಿಸಿರಿ ವಿರಾಸತ್‌ನ ಕರ‍್ಯಕಾರಿ ಸಮಿತಿಯ ಪ್ರಮುಖರಾದ ಡಾ. ಧನಂಜಯ ಕುಂಬ್ಳೆ, ಡಾ. ಎಂ.ಪಿ. ಶ್ರೀನಾಥ್, ಡಾ. ಬಿ ಜನಾರ್ದನ ಭಟ್, ವೇಣುಗೋಪಾಲ್ ಶೆಟ್ಟಿ ಸೇರಿದಂತೆ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ಕರ‍್ಯಕ್ರಮ ನಿರೂಪಿಸಿದರು.

Post a Comment

0 Comments

Advertisement