ಪುರಸಭೆಯಿಂದ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಪುರಸಭೆಯಿಂದ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ 
   
    ಮೂಡುಬಿದಿರೆ ಪೇಟೆಯ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದ ಗುಂಡಿಗಳನ್ನು ಪುರಸಭೆಯು ಮುಚ್ಚುವ ಮೂಲಕ ತಾತ್ಕಾಲಿಕ ಮುಕ್ತಿ ನೀಡಿದೆ. 
 ಪುರಸಭೆಯ ವ್ಯಾಪ್ತಿಯ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳಾಗಿದ್ದು ಇವು ವಾಹನ ಸವಾರರಿಗೆ ಮೃತ್ಯುಗುಂಡಿಗಳಾಗಿ ಪರಿಣಮಿಸುತ್ತಿದ್ದು ಈ ಬಗ್ಗೆ ಮಾಧ್ಯಮವು ಬುಧವಾರದಂದು "ವಾಹನ ಸವಾರರೇ ಎಚ್ಚರ...!
   ರಸ್ತೆಗಳಲ್ಲಿ ಮರಣ ಮೃದಂಗ ಬಾರಿಸಲು ಕಾಯುತ್ತಿವೆ ಮೃತ್ಯು ಗುಂಡಿಗಳು" ಎಂಬ ಶೀಷಿ೯ಕೆಯಡಿ ಸುದ್ದಿ ಪ್ರಕಟಿಸಿತ್ತು.
  
 ಈ ಬಗ್ಗೆ ಪುರಸಭೆಯು ನಿನ್ನೆ ಸಂಜೆ ಮಳೆ ಬಿಡುವು ನೀಡಿದಾಗ ತ್ವರಿತವಾಗಿ ಅರಣ್ಯ ಇಲಾಖೆಯ ಬಳಿಯಿಂದ ಅಮರಶ್ರೀ ಟಾಕೀಸಿಗೆ ಹಾದು ಹೋಗುವ ರಸ್ತೆ ಹಾಗೂ ಹಳೆ ಪೊಲೀಸ್ ಬಳಿಯಲ್ಲಿದ್ದ ಬೃಹತ್ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ಮಾಡಿದೆ. 

ಇನ್ನು ಕೆಲವು ಕಡೆಗಳ ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳಿದ್ದು ಮಳೆ ಸ್ವಲ್ಪ ಬೀಡುವು ನೀಡಿದರೆ ಅದನ್ನೂ ಮುಚ್ಚುವ ಕಾಯ೯ವನ್ನು ಕೈಗೊಳ್ಳಲಾಗುವುದೆಂದು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ತಿಳಿಸಿದ್ದಾರೆ.

Post a Comment

0 Comments

Advertisement