ಕಳಪೆ ಆಮದು ಅಡಿಕೆ ಸಮಸ್ಯೆ ಕೂಡಲೇ ಬಗೆಹರಿಸಿ:ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಕೋಟ

ಕಳಪೆ ಆಮದು ಅಡಿಕೆ ಸಮಸ್ಯೆ ಕೂಡಲೇ ಬಗೆಹರಿಸಿ:ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಕೋಟ
 

ದೆಹಲಿ:ಕರಾವಳಿ- ಮಲೆನಾಡು ಸೇರಿದಂತೆ, ಕರ್ನಾಟಕ ರಾಜ್ಯದ ಅಡಿಕೆ ಬೆಳೆಗಾರರು ವಿದೇಶಿ ಅಡಿಕೆ ಆಮದಿನ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಡಿಕೆ ಬೆಳೆಗಾರರ ನೆರವಿಗೆ ಬರಬೇಕೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಯಮ 377 ರಡಿ ಸದನದಲ್ಲಿ ಪ್ರಸ್ತಾಪನೆ ಸಲ್ಲಿಸುವುದರ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 ಇಂಡೋನೇಷಿಯಾ, ಮಯನ್ಮಾರ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಅಡಿಕೆಗಳು ಆಮದಾಗಿ ಭಾರತಕ್ಕೆ ಬರುತ್ತಿದ್ದು ಅವುಗಳನ್ನು ನಿಯಂತ್ರಿಸದಿದ್ದರೆ ನಮ್ಮ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಬರುತ್ತದೆ. ವಿದೇಶದಿಂದ ಬರುವ ಅಡಿಕೆ ಕಸ್ಟಮ್ಸ್ ಸುಂಕ ತಪ್ಪಿಸಲು ಹುರಿದ ಅಡಿಕೆ ಎಂದು ನಮೂದಿಸಿ ಭಾರತಕ್ಕೆ ಬರುತ್ತಿವೆ ಎಂದು ದೇಶೀಯ ಅಡಿಕೆ ಬೆಳೆಗಾರರು ದೂರಿದ್ದಾರೆ. ವಿದೇಶಿ ಅಡಿಕೆಗಳು ಸುಂಕ ತಪ್ಪಿಸಿ ಅಮದು ಬರುವುದನ್ನು ನಿಲ್ಲಿಸದಿದ್ದರೆ ಕರ್ನಾಟಕವೂ ಸೇರಿದಂತೆ ದೇಶದ ಅಡಿಕೆ ಬೆಳೆಗಾರರ ಬೆಲೆ ಕುಸಿದು ಅಡಿಕೆ ಬೆಳೆಗಾರರಿಗೆ ಬಾರಿ ಆರ್ಥಿಕ ನಷ್ಟ ಆಗಲಿದೆ. 

ದೇಶಿ ಅಡಿಕೆಯ ಚಾಲಿ ಮತ್ತು ರಾಶಿಯಂತಹ ಪ್ರಭೇದಗಳೊಂದಿಗೆ ಕಳಪೆ ಅಡಿಕೆ ಬೆರೆಸಿ ಮಾರುಕಟ್ಟೆಗೆ ಬರುತ್ತಿರುವುದು ಅಡಿಕೆಯ ಗುಣಮಟ್ಟದ ಖ್ಯಾತಿಗೆ ಕಳಂಕ ತರಲಿದೆ. ಈ ಹಿನ್ನೆಲೆಯಲ್ಲಿ CBIC ಲೆಕ್ಕಪರಿಶೋಧನೆಯೊಂದಿಗೆ ಅಡಿಕೆ ಆಮದಿನ ಬಗ್ಗೆ ಕಟ್ಟುನಿಟಿನ ಕ್ರಮ ಜರುಗಿಸಬೇಕೆಂದು ಸಂಸದ ಕೋಟ ತನ್ನ ಪ್ರಸ್ತಾಪನೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

 ಬಂದರುಗಳಲ್ಲಿ ಆಮದಾಗುತ್ತಿರುವ ಅಡಿಕೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿ ಗುಣಮಟ್ಟಕ್ಕೆ ಕಣ್ಗಾವಲು ನಡೆಸುವುದರ ಮೂಲಕ ವಿದೇಶಿ ಅಡಿಕೆ ಆಮದನ್ನು ನಿಯಂತ್ರಿಸಿ ನಮ್ಮ ಅಡಿಕೆ ಬೆಳೆಗಾರ ರೈತರ ರಕ್ಷಣೆಗೆ ಬರಬೇಕೆಂದು ಸಂಸದ ಕೋಟ ತನ್ನ ಪ್ರಸ್ಥಾಪನೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Post a Comment

0 Comments