ಮೂಡುಬಿದಿರೆ : 201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ಯಾರು ಹೆದರುವ ಅವಶ್ಯಕತೆಯಿಲ್ಲ. ಅರ್ಹ ಮತದಾರರ ಹೆಸರನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಆದರೆ ಅನರ್ಹರ ಹೆಸರನ್ನು ಇಟ್ಟುಕೊಳ್ಳುವುದಿಲ್ಲವೆಂದು ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮೇಘನಾ ಆರ್ ತಿಳಿಸಿದರು. ಸ್ಪಷ್ಟಪಡಿಸಿದರು.
ಅವರು ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕ್ಷೇತ್ರದಲ್ಲಿ 2,08,981 ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದ್ದು, ಶೇ.100ರಷ್ಟು ಸಂಗ್ರಹ ಪೂರ್ಣಗೊಂಡಿದೆ. ದಾಖಲಾಗಿರುವ 15,702 ಎಎಸ್‌ಡಿಡಿಒ ಪ್ರಕರಣಗಳ ಮರುಪರಿಶೀಲನೆಗಾಗಿ ರಾಜಕೀಯ ಪಕ್ಷಗಳ ಬೂತ್ ಏಜೆಂಟರಿಗೆ ಪಟ್ಟಿಯನ್ನು ವಿತರಿಸಲಾಗಿದ್ದು, ಆಗಸ್ಟ್ 8ರೊಳಗೆ ಬಿಎಲ್‌ಒಗಳ ಮೂಲಕ ಪರಿಶೀಲಿಸಿ ಹಿಂತಿರುಗಿಸಲು ಅವಕಾಶ ನೀಡಲಾಗಿದೆ ಎಂದರು.
ಸಹಾಯಕ ಮತದಾರರ
ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮಾತನಾಡಿ, ಆಗಸ್ಟ್ 8ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಇದುವರೆಗೆ 1,93,370 ಎಣಿಕೆ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ಶೇ.92.53ರಷ್ಟು ಪ್ರಗತಿಯಾಗಿದೆ ಎಂದರು.
ಉಳಿದಿರುವ 15,702 ಎಎಸ್‌ಡಿಡಿಒ ಪ್ರಕರಣಗಳಲ್ಲಿ 1,262 ಗೈರುಹಾಜರಾದವರು, 7,564 ಶಾಶ್ವತವಾಗಿ ಸ್ಥಳಾಂತರಗೊಂಡವರು, 4,967 ಮೃತರು ಹಾಗೂ ಸುಮಾರು 1,700 ದ್ವಿಪತ್ರಿ ಮತದಾರರ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

0 Comments