ಸಂದೀಪ್ ಬೆದ್ರ ಅವರ ಚೊಚ್ಚಲ ನಿದೇ೯ಶನದ "ಪಿಚ್ಚರ್" ಇಂದು ರಾಜ್ಯಾದ್ಯಂತ ಬಿಡುಗಡೆ

ಸಂದೀಪ್ ಬೆದ್ರ ಅವರ ಚೊಚ್ಚಲ ನಿದೇ೯ಶನದ "ಪಿಚ್ಚರ್" ಇಂದು ರಾಜ್ಯಾದ್ಯಂತ ಬಿಡುಗಡೆ
ಮೂಡುಬಿದಿರೆ : ಕಳೆದ ಹತ್ತು ವಷ೯ಗಳಿಂದ ತುಳು ಚಲನಚಿತ್ರ ರಂಗದಲ್ಲಿ ಸಹ ನಿದೇ೯ಶಕರಾಗಿ ಗುರುತಿಸಿಕೊಂಡಿರುವ ಮೂಡುಬಿದಿರೆ ತಾಲೂಕಿನ ಅಶ್ವತ್ಥಪುರದ ಸಂದೀಪ್ ಬೆದ್ರ ಅವರು ಮೊದಲ ಬಾರಿಗೆ ನಿದೇ೯ಶನ ಮಾಡಿರುವ "ಪಿಚ್ಚರ್" ಇಂದು (ಶುಕ್ರವಾರ) ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ.

ಸಂಪೂರ್ಣ ಹಾಸ್ಯಮಯ ಕಥೆಯನ್ನು ಹೊಂದಿರುವ " ಪಿಚ್ಚರ್" ನಲ್ಲಿ ಅನೇಕ ಖ್ಯಾತ ನಟರು, ಹಾಸ್ಯ ಕಲಾವಿದರು ಮತ್ತು ಅನುಭವಿ ತಂತ್ರಜ್ಞರನ್ನೊಳಗೊಂಡ ತುಳು ಚಿತ್ರರಂಗದ ದೊಡ್ಡ ತಾರಾ ಬಳಗವಿದೆ. 

 ಸಂದೀಪ್ ಬೆದ್ರ ಅವರು ಕನ್ನಡ, ತುಳು ಮತ್ತು ಕೊಂಕಣಿ ಸೇರಿ 24 ಕ್ಕೂ ಅಧಿಕ ಸಿನೆಮಾಗಳಲ್ಲಿ ಸಹ ನಿದೇ೯ಶಕರಾಗಿ ಕೆಲಸ ಮಾಡಿರುವ ಅನುಭವಿಯಾಗಿದ್ದು ಇದೀಗ " ಪಿಚ್ಚರ್" ಮೂಲಕ ನಿದೇ೯ಶಕರಾಗಿ ಸಿನಿ ಪ್ರಿಯರ ಮುಂದೆ ಬಂದಿದ್ದು ಜನರು ಸಹಕಾರ ನೀಡುವ ನಿರೀಕ್ಷೆಯನ್ನು ಹೊಂದಿದ್ದಾರೆ.

Post a Comment

0 Comments