ಮಿಜಾರು : ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರಿಗೆ ಗಾಯ

 ಮಿಜಾರು : ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರಿಗೆ ಗಾಯ



ಮೂಡುಬಿದಿರೆ : ಮಿಜಾರಿನ ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಮೂವರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

 ಆಳ್ವಾಸ್ ಕಾಲೇಜಿನಲ್ಲಿ ವಾಚ್ ಮೆನ್ ಆಗಿರುವ  ಶಿವರಾಮ ( 31)  ಆತನ ಪತ್ನಿ ಗಂಗಾ (25) ಹಾಗೂ ಪುತ್ರ ಆದರ್ಶ್ (6 )  ಗಾಯಗೊಂಡರು. 

ಶಿವರಾಮ ಅವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿವೆ.

ಗ್ಯಾಸ್ ಸೋರಿಕೆಯಾಗಿರುವ ಬಗ್ಗೆ ಗಮನಕ್ಕೆ ಬಾರದೆ ಇರುವುದರಿಂದ ಬೆಂಕಿ ಹಚ್ಚಿದ್ದಾಗ ಸ್ಟೌವ್ ಗೆ ಬೆಂಕಿ ಹತ್ತಿಕೊಂಡು ಘಟನೆ ನಡೆದಿದೆ. 


ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Post a Comment

0 Comments