ವಾಹನ ಸವಾರರೇ ಎಚ್ಚರ...! ರಸ್ತೆಗಳಲ್ಲಿ ಮರಣ ಮೃದಂಗ ಬಾರಿಸಲು ಕಾಯುತ್ತಿವೆ ಮೃತ್ಯು ಗುಂಡಿಗಳು

ವಾಹನ ಸವಾರರೇ ಎಚ್ಚರ...! ರಸ್ತೆಗಳಲ್ಲಿ ಮರಣ ಮೃದಂಗ ಬಾರಿಸಲು ಕಾಯುತ್ತಿವೆ ಮೃತ್ಯು ಗುಂಡಿಗಳು
  ಮೂಡುಬಿದಿರೆ : ಮಳೆಗಾಲದಲ್ಲಿ ಗುಡ್ಡ ಪ್ರದೇಶಗಳಲ್ಲಿ ಗೋಚರಿಸುವ ಮಿನಿ ಜಲಪಾತಗಳಂತೆ, ರಾಜ್ಯ, ಪುರಸಭೆ ಹಾಗೂ ಪಂಚಾಯತ್ ವ್ಯಾಪ್ತಿಗಳಲ್ಲಿರುವ ರಸ್ತೆಗಳ ಉದ್ದಕ್ಕೂ ಅಲ್ಲಲ್ಲಿ ಗುಂಡಿಗಳಾಗಿದ್ದು ಇವು ವಾಹನ ಸವಾರರಿಗೆ ಮೃತ್ಯುಗುಂಡಿಗಳಾಗಿ ಪರಿಣಮಿಸುತ್ತಿದ್ದು ಈ ಬಗ್ಗೆ ಸವಾರರು ಎಚ್ಚರ ವಹಿಸಬೇಕಾಗಿದೆ. 
  ಮೂಡುಬಿದಿರೆಯಿಂದ ಬೆಳ್ತಂಗಡಿಗೆ ತಲುಪುವ ರಾಜ್ಯ ಹೆದ್ದಾರಿಯಲ್ಲಿ ಹಲವಾರು ಶಾಲಾ ಕಾಲೇಜುಗಳಿದ್ದು ಇಲ್ಲಿಗೆ ಶಿಕ್ಷಣ ಪಡೆಯಲು ಹೋಗುವ ಹಲವಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರುಗಳು ದ್ವಿಚಕ್ರ ವಾಹನಗಳನ್ನು ಆಶ್ರಯಿಸಿಕೊಂಡಿದ್ದಾರೆ. 
 ಅದೇ ರೀತಿ ಮೂಡುಬಿದಿರೆಯಿಂದ ವಿದ್ಯಾಗಿರಿ ಆಳ್ವಾಸ್ ಕಾಲೇಜಿಗೆ ಹೋಗುವ ವಿದ್ಯಾಥಿ೯ಗಳು ಹೋಗುವ ರಸ್ತೆಗಳಲ್ಲಿ ಕೂಡಾ ದೊಡ್ಡ ದೊಡ್ಡ ಗುಂಡಿಗಳು ತೆರೆದುಕೊಂಡು ಮೃತ್ಯು ಗುಂಡಿಗಳಾಗಿ ಮಾಪ೯ಟ್ಟಿದ್ದು ದ್ವಿಚಕ್ರ ವಾಹನ ಸವಾರರು ಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಬೇಕಾಗಿದೆ ಇಲ್ಲದಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ.
   ಮಳೆಗಾಲ ಆರಂಭವಾಗುತ್ತಿದ್ದಂತೆ ಅಧಿಕ ಮಳೆಯ ಕಾರಣದಿಂದಲೋ ಅಥವಾ ಕಳಪೆ ಡಾಮರಿಕರಣ ಕಾರಣದಿಂದಲೋ ಏನೋ ಪ್ರತಿವಷ೯ವೂ ಪುರಸಭಾ ವ್ಯಾಪ್ತಿಯ ವಿಜಯನಗರ, ಅಮರಶ್ರೀ ಟಾಕೀಸಿನ ಬಳಿ, ಸತ್ಯನಾರಾಯಣ ದೇವಸ್ಥಾನ, ಹಳೆ ಪೊಲೀಸ್ ಠಾಣಾ ಆಟೋ ಪಾಕ್೯, ರಾಜ್ಯ ಹೆದ್ದಾರಿಯ ರೋಟರಿ ಶಾಲೆ, ಮೆಸ್ಕಾಂ, ಮಹಾವೀರ ಕಾಲೇಜು ಬಳಿ, ಕೀತಿ೯ ನಗರ, ಸುವಣ೯ ನಗರ, ಕಲ್ಲಬೆಟ್ಟು ಮಾರಿಗುಡಿ ಸಮೀಪ, ಕಲ್ಲಬೆಟ್ಟು ಶಾಲೆ, ಗಂಟಾಲ್ ಕಟ್ಟೆ, ಉಪೆ೯ಲ್ ಪಾದೆ, ಮಾರೂರು ಹಾಗೂ ಹೊಸಂಗಡಿವರೆಗೆ ರಸ್ತೆಯುದ್ದಕ್ಕೂ ಮೃತ್ಯುಗುಂಡಿಗಳು ಬಾಯ್ತೆರೆದು ಕಾಯುತ್ತಾ ಕುಳಿತಿವೆ. 
  
ಮಳೆ ಕಡಿಮೆಯಾಗುವ ಸೂಚನೆ ಸಿಗುತ್ತಿದ್ದಂತೆ ಪುರಸಭೆ ಹಾಗೂ ಪಿಡಬ್ಲ್ಯುಡಿ ಇಲಾಖೆಯಿಂದ ರಸ್ತೆ ಗುಂಡಿಗಳಿರುವಲ್ಲಿಗೆ ತೇಪೆ ಕಾಯ೯ ಮಾಡಲಾಗುತ್ತದೆ ಆದರೆ ದುರಾದೃಷ್ಟಕ್ಕೆ ಜೋರಾಗಿ ಮಳೆ ಬೀಸಿದರೆ ಮತ್ತೆ ಹಾಕಿದ ತೇಪೆ ನೀರಿಗೆ ಕೊಚ್ಚಿ ಹೋಗಿ ಮತ್ತೆ ಹೊಂಡಗಳು ಸೃಷ್ಟಿಯಾಗುತ್ತವೆ ಆದ್ದರಿಂದಲೇ ರಸ್ತೆಗಳಲ್ಲಿ ಅದೆಷ್ಟೂ ಗುಂಡಿಗಳಾಗಿದ್ದರೂ ಸಂಬಂಧಪಟ್ಟ ಇಲಾಖೆಯವರು ಗುಂಡಿ ಮುಚ್ಚುವ ಕಾಯ೯ವನ್ನು ಮಾಡುತ್ತಿಲ್ಲ ಆದರಿಂದ ವಾಹನ ಸವಾರರೇ ರಸ್ತೆಗಳಲ್ಲಿ ಸಂಚಾರ ಮಾಡುವಾಗ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಹೋಗುವುದು ಅನಿವಾಯ೯ವಾಗಿದೆ...

ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Post a Comment

0 Comments