ವಿವಾಹಿತೆ ನಾಪತ್ತೆ

ವಿವಾಹಿತೆ ನಾಪತ್ತೆ 
ಮೂಡುಬಿದಿರೆ : ಶಿವಮೊಗ್ಗದಿಂದ ಮೂಡುಬಿದಿರೆಯ ತನ್ನ ಅಕ್ಕನ ಮನೆಗೆ ಬಂದಿದ್ದ ವಿವಾಹಿತ ಮಹಿಳೆ ಅಲ್ಲಿಂದ ತನ್ನ ಗಂಡನ ಮನೆಗೆ ಮರಳಿ ಹೋಗದೆ ನಾಪತ್ತೆಯಾಗಿದ್ದಾರೆ. 

ಮೂಡುಬಿದಿರೆ ತಾಲೂಕಿನ ನೆಲ್ಲಿಕಾರಿನ ಸಬೀರ ಬಾನು (20ವ)ವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ರಾಜಶೇಖರ ಟಾಕೀಸು ಹಿಂಭಾಗದ ಮನೆಯ ಅಶ್ಫಾಕ್ ಎಂಬವರಿಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು.

ಮದುವೆಯಾದ ನಂತರ
ಮೂಡುಬಿದಿರೆ ಸಮೀಪದಲ್ಲಿರುವ ತನ್ನ ಅಕ್ಕನ ಮನೆಗೆ ಬರುತ್ತಿದ್ದಳು. ಜು. 27ರಂದು ಅಕ್ಕ ತನ್ನ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಬರುವಷ್ಟರಲ್ಲಿ ಸಬೀರಾ ಬಾನು ಮನೆಯಲ್ಲಿರಲಿಲ್ಲ. ಗಾಬರಿಗೊಂಡ ಅಕ್ಕ ಸಂಬಂಧಿಕರ ಮನೆಗೆ,ಗಂಡನ ಮನೆಗೆ ಕಾಲ್ ಮಾಡಿ ವಿಚಾರಿಸಿದರೂ ಪತ್ತೆಯಿಲ್ಲ. ಬಳಿಕ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
 ಆಕೆ ತನ್ನ ಗಂಡನ ಮನೆಯ ಪಕ್ಕದ ಮನೆಯ ಯುವಕನೊಂದಿಗೆ ಸ್ನೇಹದಿಂದಿದ್ದು ಆತನೊಂದಿಗೇ ಹೋಗಿರಬಹುದೆಂದು ಶಂಕಿಸಲಾಗಿದೆ.

Post a Comment

0 Comments